Submission 4172

ಚೈತನ್ಯದ ಖನಿಯೇ

ರಚನೆ : ಬಸವರಾಜ್ ಸಾರ್ಥವಳ್ಳಿ

----------------------------------

ನನ್ನ ಮೈಮನದ ಮುಂಜಾವೇ, ನನ್ನ ಧೀ-ಶಕ್ತಿಯ ಗುರುವೇ, ನೀನೆಲ್ಲಿರುವೆ? ನಿನಗಾಗಿ ಹವಣಿಸುತ್ತಿದೆ ಎನ್ನ ಮನ. ನನ್ನ ಅಂತರಾಳದ ತುಡಿತವೇ ಅಂತರಾತ್ಮದ ಮಿಡಿತವೇ ಬಾ ನನ್ನ ಬುದ್ಧಿ-ಮನಸ್ಸು ನಿನ್ನ ಬೇಡುತ್ತಿದೆ. ಭವ್ಯ ಭವಿತವ್ಯದ ಶಿಲ್ಪಿಯೇ ನಿನ್ನ ಜ್ಞಾನದ ಬೆಳಕಲ್ಲಿ ಬಯಲಾಗಲು ಎನ್ನ ಮನ ಹವಣಿಸುತ್ತಿದೆ. ನನ್ನ ಗುರಿ, ಆಸೆ, ಕನಸೆಂಬ ನೇಗಿಲಿಗೆ ನೊಗವಾಗಿ ಬಾ... ಶಿಸ್ತು, ಶ್ರದ್ಧೆ, ಸಂಯಮವೆಂಬ ಹಸಿರಿನ ಉಸಿರಾಗಿ ಬಾ. ಓ ನನ್ನ ನಿತ್ಯ ನೂತನ ಸತ್ಯವೇ ನನ್ನೊಳಗಿನ ಚೈತನ್ಯದ ಖನಿಯೇ ಓ ಗುರುವೆಂಬ ಮಾಂತ್ರಿಕನೇ ನೀನೇ ನಿತ್ಯ ನೂತನ ಸತ್ಯ.

----------------------------------

ನೋಂದಣಿ ಐಡಿ : KPFS2-7898

17
Votes
211
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top