Submission 4170

ಕರುಳಿನ ಕುಡಿಯ ಹುಡುಕಾಟ

ರಚನೆ : ಶರಣಪ್ಪ ಜೂಲಕಟ್ಟಿ

----------------------------------

ಒತ್ತಾಯ್ತು ಎತ್ತ ಹೋಯಿತು ನನ್ನ ಕಂದಾ ದಿನವಿಡೀ ಅಂಗಳದಲ್ಲಿ ಆಡುವಾ ನನ್ನ ಕಂದ ಸೂರ್ಯ ಮುಳುಗುವ ಒತ್ತಾಯ್ತು ಕಟ್ಟಿಟ್ಟ ಬುತ್ತಿ ಬಿಚ್ಚಿಲ್ಲ, ಉಂಡಿಲ್ಲ ಎತ್ತ ಹೊಯಿತು ನನ್ನ ಕಂದ ಅಕ್ಕಾ.... ನೀ ನೋಡಿಯಾ... ಬೇ ತಂಗಿ ನೀಯಾರ ನೋಡಿಯಾ... ಎತ್ತಾ ಹೋದ ಕುರುಸಾಲ್ಯ.... ಎಷ್ಟು ಉರುಸ್ತಾನ ಹೆತ್ತಾ ಹೊಟ್ಟಿನ, ಆ ಓಣಿ-ಈ ಓಣಿ ತಿರು-ತಿರುಗಿ ಕಾಲ ಬಿದ್ದೋತು, ಇನ್ನು ಸಿಕ್ಕಿಲ್ಲ ...ಏ ತಮ್ಮ ಬಾರಪ್ಪಾ ನನ್ನ ಕಂದಾ ನಾ ನೋಡಿಯಾ... ಶಾಲಿಯ ಗುಡಿಮುಂದ ಗೋಲಿ-ಗಿಲಿಯ ಆಡಕತ್ಯಾನೇನಾ ಹೋಗ್ಯಾರ ನೋಡಿ ಬಾರಾ ಸ್ವಲ್ಪ... ಏನು ಅರಿಯದಾವ, ಯಾರಾ ತಂಟೆಕ್ಕೆ ಹೋಗದಾವ.. ಒತ್ತಾರೆ ಹೋಗ್ಯಾನ ಸೂರ್ಯ ಮುಳುವ ಒತ್ತಾಯ್ತು ಇನ್ನೂ ಸಿಕ್ಕಿಲ್ಲ..... ಹೇ ದ್ಯಾವ್ರೆ

----------------------------------

ನೋಂದಣಿ ಐಡಿ : KPFS2-7897

25
Votes
314
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top