ಗುರು
ರಚನೆ : ಶ್ರುತಿ ಎಸ್
----------------------------------
ಜ್ಞಾನವೆಂಬ ದಾರಕ್ಕೆ ಅಕ್ಷರದ ಮುತ್ತುಗಳನ್ನು ಪೋಣಿಸಿ ಶಿಕ್ಷಣವೆಂಬ ಮಾಲೆ ಮಗುವಿಗೆ ಹಾಕಿ ಮಗುವಿನ ವ್ಯಕ್ತಿತ್ವವನ್ನು ರೂಪಿಸಿದಾತ ಕಾಡ ಕಲ್ಲನ್ನು ಕೆತ್ತುವ ಶಿಲ್ಪಿಗಾರ ಮಗುವಿನ ಭವಿಷ್ಯದ ಕನಸುಗಾರ ಭರವಸೆ ತುಂಬ ಮೋಜುಗಾರ ಸಂಸ್ಕಾರ ನೀಡುವ ಸಾಹುಕಾರ ಗುರು ನೀವೆಂದು ಜೀವಂತ ಮೂರ್ತಿ ನೀಡುವವರು ನಮಗೆ ಜ್ಞಾನ ಸ್ಪೂರ್ತಿ ಅಜ್ಞಾನದಿಂದ ಜ್ಞಾನಕ್ಕೆ ಬದಲಾಯಿಸುವ ಜ್ಯೋತಿ ಇರಲಿ ನಿಮ್ಮ ಮಾರ್ಗದರ್ಶ ಜೀವನ ಪೂರ್ತಿ
----------------------------------
ನೋಂದಣಿ ಐಡಿ : KPFS2-7871