ಅವನು-ಪ್ರೀತಿ-ಅವಳು
ರಚನೆ : ನಿಖಿತಾ ತಳವಾರ
----------------------------------
ಕಳುಹಿಸಲಿ ಹೇಗೆ ಅವನನ್ನು,ತಿರುಗಿ ನೆಪ ಹೇಳಿ ಬರುವವನನ್ನು?! ಮರೆಯುವುದಾದರೂ ಹೇಗೆ ಅವನನ್ನು, ನನ್ನಲ್ಲೇ ಅವನಾಗಿ ಉಳಿದವನನ್ನು?! ಪ್ರಶ್ನಿಸಲಿ ಹೇಗೆ ಅವನನ್ನು ಉತ್ತರಿಸಿದಷ್ಟು ಪ್ರಶ್ನೆಯಾಗಿಯೇ ಉಳಿಯುವವನನ್ನು?! ಎಲ್ಲವೂ ಮರೆತಂತೆ ನಟಿಸುವುದು ಸುಲಭವಿಲ್ಲ ಹಾಗಂತ ಕಾಡುವ ಪ್ರತಿ ನೆನಪಿಗೆ ನನ್ನನು ಒಪ್ಪಿಸುವುದರಲ್ಲಿ ಅರ್ಥವಿಲ್ಲ ಅಂದುಕೊಂಡರೆ ಎಲ್ಲವೂ ಹೂವಿನಷ್ಟೇ ಹಗುರ ಇಲ್ಲದಿದ್ದರೆ ಹೂವು ಕೂಡ ಬೆಟ್ಟದಷ್ಟೇ ಭಾರ, ಆದರೂ ಕಾದಿರುವೆ ಸಮಯದ ಮೋಡಿಗೆ ಭರವಸೆಯ ಬೆಳಕಿಗೆ
----------------------------------
ನೋಂದಣಿ ಐಡಿ : KPFS2-7849