Submission 4074

ಚೈತ್ರದ ಕೋಗಿಲೆ

ರಚನೆ : ಶ್ರೀಧರ ರೋಹಿಡೇಕರ್

----------------------------------

ಸೃಷ್ಟಿಯ ಆದಿಯೇ ನಮ್ಮ ಉಗಾದಿ ಋತುಗಳ ರಾಜ ವಸಂತನ ಆಗಮನ ಸ್ವಾಗತಿಸುವೆವು ಎಲ್ಲರೂ ಸಂತಸದಿ ಅಂದಿನಿಂದ ಅರಂಭ ಕೋಗಿಲೆ ಗಾನ ಬೇವು ಬೆಲ್ಲಗಳ ಸಂಕೇತ ಈ ಜೀವನ ಮೈ ಬಣ್ಣ ಕಪ್ಪಾದರೂ ಕಿವಿಗೆ ಇಂಪಾದ ಗಾನ ಆಲಿಸುತ್ತ ಮಧುರ ಗಾನ ಸಾಗಿದೆ ನಮ್ಮ ಜೀವನ ಇದುವೇ ಜೀವ / ಮಾಡಿದೆ ಜೀವನ ಪಾವನ ಊರಾಗಲೀ ಕಾದಾಗಲೀ ನಿಲ್ಲದು ಅದರ ಗಾನ ಮಸಣದಲ್ಲೂ ಎಲ್ಲೋ ಕುಳಿತು ಮಾಡುವದು ನಾರಾಯಣನ ಧ್ಯಾನ ಹಾಡುತ್ತ ಹೇಳುವದು ಸಾಂತ್ವನ ಕೋಗಿಲೆಗಿಲ್ಲ ಹಾರಾಡಲು ಹಾಡಲು ಯಾವುದೇ ಬಂಧನ ಬದುಕಬೇಕು ಗೋಮಾತೆಯಂತೆ ನೆರಳಾಗಿ ಫಲ ನೀಡುವ ವೃಕ್ಷದಂತೆ ಮುದ ನೀಡಬೇಕು ಕೋಗಿಲೆಯ ಧ್ವನಿಯಂತೆ ಸಾರ್ಥಕವಾಗಬೇಕು ಈ ಜೀವನ ಸವಿ ಜೇನಿನಂತೆ

----------------------------------

ನೋಂದಣಿ ಐಡಿ : KPFS2-7829

38
Votes
264
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top