ಸ್ವಾನುರಾಗ
ರಚನೆ : ಸಿ ದೀಪಿಕಾ ಭಟ್
----------------------------------
ನಿನ್ನ ಬಗೆಗಿನ ಅವರಿವರ ಹೇಳಿಕೆಯನ್ನು ಕೇಳಿಯೂ ಕೇಳಿಸದಂತೆ ಇದ್ದು ಬಿಡು ನಿನ್ನ ಒಳಗಿನ ಆ ಪರಿಶುಧ್ದ ಹೃದಯವನ್ನು ಅರಿತವರೊಂದಿಗೆ ನೀ ಬೆರೆತು ಬಿಡು ನಿನ್ನ ಕಂಗಳಲಿ ಹೊಳೆಯುವ ನಿನ್ನಂತರಂಗ ಎಷ್ಟು ಜನರಿಗೆ ಕಂಡೀತು ಕೇಳಿ ನೋಡು ಬೆರಳುಗಳು ಸಾಲದಿರೆ ಎಣಿಸಲು ಸಂಖ್ಯೆಗಳ ಭಾವ ತುಂಬಿ ಖುಷಿಯಲ್ಲಿ ಅತ್ತು ಬಿಡು ಮರುಗದೆ ಹೊರಡು ನಿನ್ನನು ನೀನು ಪ್ರೀತಿಸಲು ಸಿಗದಿದ್ದರೆ ಜಗದಲ್ಲಿ ಅಂತವರ ಬೀಡು ನಿನ್ನೊಡಲೇ ನಿನ್ನೆಲ್ಲಾ ಭಾವನೆಗಳಿಗೆ ಗುಡಿಸಲು ಬೇರೆಯವರ ಹಂಗು ತೊರೆದು ಬಿಡು
----------------------------------
ನೋಂದಣಿ ಐಡಿ : KPFS2-7795