ನೀ ಒಳಗೆ ಬರೋಹಾಗಿಲ್ಲ
ರಚನೆ : ಭೀಮಸಿ ಕೊಲೆಪ್ಪನವರ್
----------------------------------
ಕಪ್ಪಿಲ್ಲ ಬಿಳುಪು ಇಲ್ಲ ಆದರೂ ನೀ ಒಳಗ ಬರೋಹಾಗಿಲ್ಲ ಏಕೆಂದರೆ ನೀ ಸಣ್ಣವನಲ್ಲ ಎಲ್ಲರಂತೆ ನೀನು ಮನುಷ್ಯನೇ ಆದರೂ ನೀ ಒಳಗೆ ಬರೋಹಾಗಿಲ್ಲ ರಕ್ತದ ವರ್ಣ ಒಂದೇ ಅಲ್ಲ ಆದರೂ ನೀ ಒಳಗೆ ಬರೋ ಹಾಗಿಲ್ಲ ಏಕೆಂದರೆ ನೀ ಸಣ್ಣವನಲ್ಲ ಸೂತಕದ ವಾದ್ಯ ನಿನಾಗಬೇಕು ಸಮಾರಂಭಗಳಲ್ಲಿ ನಿನಗೆ ಸಾನಿಧ್ಯವಿಲ್ಲಾ, ಕೆರೆಯ ನೀರನ್ನ ನೋಡಿ ನಿನ್ನ ಬಿಂದಿಗೆ ಅಳುವುದಲ್ಲ ದುಮುಕುವ ಅವಕಾಶ ಅದಕಿಲ್ಲ..! ನನ್ನ ಪಾದುಕೆಯ ಸ್ಥಳದಲ್ಲಿ ನೀ ನಿನ್ನ ಶಿರದ ಮೇಲೆ ನಾ, ಏಕೆಂದರೆ ನಾ ದೊಡ್ಡವನಲ್ಲ
----------------------------------
ನೋಂದಣಿ ಐಡಿ : KPFS2-7794