ಬದುಕು ಬರಹ
ರಚನೆ : ಸಂಗೀತಾ ವಣಗೇರಿ
----------------------------------
ಬದುಕು ತುಂಬಾ ಬಾಯಾರುತ್ತಿದೆ ನೀರು ಕುಡಿದರೆ ಶೀತ ಕುಡಿಯದಿದ್ದರೆ ಉಷ್ಣ ಬದುಕು ತುಂಬಾ ಹಸಿದಿದೆ ಉಂಡರೆ ಅಜೀರ್ಣ ಉಣದಿದ್ದರೆ ಅಪೂರ್ಣ ಬದುಕ ತುಂಬಾ ನೋವಿದೆ ಹೊರಗೆಡವಿದರೆ ನಾಟಕ ಒಳಗಿದ್ದರೆ ಸಂಕಟ ಬದುಕು ತುಂಬಾ ಭಾರವಿದೆ ಹೊರಟರೆ ನಿಧಾನ ನಿಂತರೆ ಮರಣ
----------------------------------
ನೋಂದಣಿ ಐಡಿ : KPFS2-7780