Submission 3984

ಸರ್ವತ್ರ ಸತ್ಯ

ರಚನೆ : ರಾಜಬಕ್ಷಿ ಕೆ

----------------------------------

ಹರಡಿ ಅನಂತಕೆ ಕುಸಿವುದು ಏಕಾಂತ್ಯಕೆ ಪುನರಪಿ ಅನಂತೇಕಾಂತ್ಯದ ನಡುವೆ ಮೇಲು-ಕೀಳಿನ ಜತ್ತುಕ ಮೂಡುವ ಕುಡಿಯೊಂದು ಮಡಿವುದೊಂದು ದಿನ ಮಿಡಿವುದು ಮಧ್ಯ ಮೂರು ದಿನ ಬ್ರಹ್ಮಾಂಡದ ಭಾಂಡೆಯಲಿ ಬಹುದಿನಗಳಿಲ್ಲ ನಿನಗೆ ಬದುಕ ಬದುಕಬೇಕು. ಬವಣೆಗಳಲ್ಲ ನೂರಾರು ನಾಮಗಳು ನೂಕಾಡುವ ಜಾತಿ-ಧರ್ಮಗಳು ನೀಗದ ಅಂತ್ಯದಿ ಐಕ್ಯಕಾಣುವವು ತಾರಜನ್ಯರು ನಾವು ತರು-ಲತೆಗಳಂತೆ ಇರಬೇಕು ತೆರೆದೆದೆಯಲಿ ಸಕಲರ ಸಂತೈಸಬೇಕು ಮತಿಯ ಮಿತಿಯಲಿ ಹಿಡಿದು ಮನುಜ ಧರ್ಮವ ಬಿತ್ತು ಮುಂದದರಲಿ ಸಹಬಾಳ್ವೆ ತೂಗುವುದು 'ದೇವರು' ಎಂಬುದೇ ಮಿಥ್ಯ ಮನುಜ ಧರ್ಮವೇ ಸತ್ಯ ಬಿತ್ತಿ ಹರಡಿರೋ ಈ ಸರ್ವತ್ರ ಸತ್ಯವ

----------------------------------

ನೋಂದಣಿ ಐಡಿ : KPFS2-7754

0
Votes
118
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top