ಋತುಗಳ ಚಕ್ರದಲ್ಲಿ
ರಚನೆ : ಸುಶ್ಮಿತಾ ಚಂದ್ರಶೇಖರ
----------------------------------
ಋತುವೆಂಬ ಚಕ್ರಗಳೆರಡು ಒಂದು ಭೂಮಿಗಾದರೆ, ಇನ್ನೊಂದು ಹೆಣ್ಣಿಗೆ ಭೂಮಿಯ ಋತು ಪ್ರಕೃತಿಗೆ ನವಿರ ತರುವುದು ಹೆಣ್ಣಿನ ಋತು ಜೀವನಕೆ ಸಿರಿಯ ತರುವುದು ನಾಳಿನ ಬೆಳಕು ಕಾಣಲು ಅವಳು ನೋವಿನ ಕತ್ತಲೆಯ ದಾಟಲೇಬೇಕು ಪ್ರಕೃತಿಯಂತೆ ಋತು ಚಕ್ರದ ಮರ್ಮ ಅರ್ಥೈಸಿ ಅವಳು ಸಾಗಲೇಬೇಕು ಯುಗಗಳ ಕನಸು ನನಸಾಗಿಸಲು ಇಬ್ಬರು ಚಕ್ರವು ತಿರುಗಲೇಬೇಕು ಭೂಮಿಯಂತೆ ಹೆಣ್ಣು ಕೂಡ ತನ್ನ ಪಥವ ಪೂರೈಸಲೇಬೇಕು.
----------------------------------
ನೋಂದಣಿ ಐಡಿ : KPFS2-7753