ಬಾ ಬಾ ಟೆಕ್ನಾಲಜಿಯೇ
ರಚನೆ : ಗುಡ್ಡಪ್ಪ.ಎನ್.ಚತ್ರಮ್ಮನವರ
----------------------------------
ಚಿಂತೆ ಮಾಡಿ ಚಿತೆಯೇರಲು ಮಲಗಿರುವೆ ಜೋಗುಳ ಹಾಡಿ ನಿದ್ದೆ ಮಾಡಿಸಲು ಬಾ ಒಳಗೂ ಹೊರಗೂ ಹೊಲಸು ಮೆತ್ತಿಕೊಂಡು ಮಸಿನ್ ಒಳಗೆ ಕುಳಿತಿರುವೆ ಕಪ್ಪೆಯಂತೆ ಶುದ್ದ ಜಳಕವ ಮಾಡಿಸಲು ಬಾ ಕೈಕಟ್ಟಿಕೊಂಡು ಬಟ್ಟೆಗೆಟ್ಟು ಕಳೆದ ಬಟ್ಟೆಯ ಮಸಿನ್ ಒಳಗೆ ತುರುಕಿರುವೆ ಚೆಂದವಾಗಿ ತೊಳೆದು ಇಸ್ತ್ರಿ ಮಾಡಿ ಅಂದವಾಗಿ ತೊಡಿಸು ಬಾ ಸಂತೆ ಮಾಡಿ ಕುಂತು ಕೆಟ್ಟಿರುವೆ ರುಚಿ ರುಚಿ ಅಡುಗೆ ಮಾಡಿಸಿ ಬಾಯಿಗೆ ತುತ್ತು ತಂದು ಇಕ್ಕು ಬಾ ಪುಸ್ತಕವ ಬಿಟ್ಟು ಕೈಯಾಗ ಮೊಬೈಲ್ ಹಿಡಿದಿರುವೆ ಹೊಸಜಗತ್ತು ತೋರಿಸು ಬಾ
----------------------------------
ನೋಂದಣಿ ಐಡಿ : KPFS2-7726