ರೈತ ದೇಶದ ಬೆನ್ನೆಲುಬು
ರಚನೆ : ರಾಘವೇಂದ್ರ ಎಚ್ ಹಳ್ಳಿ
----------------------------------
ಬೆಳೆಗೆ ಬೆಲೆ ಇಲ್ಲದೇ ನಿತ್ಯ ಕಣ್ಣೀರಿಡುವನು ಸಾಲದ ಸುಳಿಯಲ್ಲಿ ಸಂಸಾರ ನೀಗಿಸುವನು ದೇಶಕ್ಕೆ ಅನ್ನ ನೀಡುವ ಕಾಯಕ ಯೋಗಿ ನಿಸ್ವಾರ್ಥ ಸೇವೆ ಮಾಡುವಂತ ಶಿವಯೋಗಿ ರಾಷ್ಟ್ರಕ್ಕೆ ಬೆನ್ನೆಲುಬಾಗಿ ನಿಂತ ನೇಗಿಲಯೋಗಿ ಆಸೆ-ಆಕಾಂಕ್ಷೆಳನ್ನ ತೊರೆದು ಉಳುವ ಯೋಗಿ ರೈತ ನಿತ್ಯವೂ ಭೂಮಿ ತಾಯಿಯ ಸೇವಕನು ದೇಶಾದ್ಯಂತ ಹಸಿವು ನೀಗಿಸುವ ಅನ್ನದಾತನು ಜಾತಿ ಬೇಧ-ಭಾವ ಇಲ್ಲದಂತ ಶ್ರೇಷ್ಠ ಶ್ರಮಿಕನು ಯಾರ ಹಂಗೂ ಇಲ್ಲದಿರುವ ಭೂ ಮಾಲಿಕನು ಕಷ್ಟ - ಸುಖದಲ್ಲಿ ಹೆಗಲಿಗೆ ಹೆಗಲಾಗೋಣ ರೈತರ ಪರವಾಗಿ ಹೋರಾಟವ ಮಾಡೋಣ ಅನ್ನದಾತನಿಗೆ ನಾವೆಲ್ಲ ಗೌರವ ಸಲ್ಲಿಸೋಣ ನೇಗಿಲು ಯೋಗಿಯ ಬಾಳಿಗೆ ಬೆಳಕಾಗೋಣ
----------------------------------
ನೋಂದಣಿ ಐಡಿ : KPFS2-7724