Submission 3932

ನಮ್ಮ ಹೆಮ್ಮೆಯ ಸರಕಾರಿ ಶಾಲೆ

ರಚನೆ : ನಾಗರಾಜ ಪಿ ಭುಳ್ಳಾ

----------------------------------

ರಜಾ ದಿನಗಳು ಮುಗಿದವು ಶಾಲೆಯ ಬಾಗಿಲು ತೆರೆದವು ಗಂಟೆಯ ಶಬ್ದ ಕೇಳಿಸಿತು ಹೆಗಲಿಗೆ ಬ್ಯಾಗು ಬಂದಿತು. ಸ್ವಚ್ಛ ಮನಸ್ಸುಗಳ ಮಿಲನ ಸಿಗುವುದು ಬಿಸಿ ಊಟ ಮಧ್ಯಾಹ್ನ ಗುರುಗಳು, ನಮ್ಮ ಬಾಳ ಬೆಳಗುವ ಹಿತೈಷಿಗಳು. ಎಲ್ಲರಲ್ಲೂ ಒಂದೇ ಸಮವಸ್ತ್ರ ಇವರು ನಮ್ಮ ಭಾರತದ ಭವಿಷ್ಯದ ನಕ್ಷತ್ರ ಕೊಡುವರು ಬಟ್ಟೆ,ಪುಸ್ತಕ, ಶಿಕ್ಷಣ ಕಾಣಿಕೆ ಆಟದೊಂದಿಗೆ ಪಾಠದ ಕಲಿಕೆ. ನೀಡುವರು ನೈತಿಕ ಮೌಲ್ಯವು ಬಾಳಿಗೆ ಬೆಳಗಿಸುವರು ನಮ್ಮಲ್ಲಿ ಜ್ಞಾನ ದೀವಿಗೆ ಗೋಡೆಗಳ ಮೇಲೆ ನಾಣ್ಣುಡಿಗಳ ಮಾಲೆ ಇದು ನಮ್ಮ ಹೆಮ್ಮೆಯ ಸರಕಾರಿ ಶಾಲೆ.

----------------------------------

ನೋಂದಣಿ ಐಡಿ : KPFS2-7705

1
Votes
113
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top