ಯಜಮಾನ
ರಚನೆ : ರವೀಂದ್ರ ವೀ ಮುನ್ನೋಳಿಮಠ
----------------------------------
ಉದ್ದಕ್ಕೂ ಹರಡಿದ ಮುಗಿಲಿಗೆ ಆಧಾರದ ಹಂಗಿಲ್ಲ ಸುರಿವ ಮಳೆ ಸಾರಿ ಬಂದ ಬಿಸಿಲು ತೇಲಿದ ಗಾಳಿಗೆ ಸುಂಕವಿಲ್ಲ ಭದ್ರವೂರಿದ ಪರ್ವತಕೆ ಪಾಯದ ಗೊಡವಿಲ್ಲ ಹರಿದ ನದಿ ತಿರುವಿಗೆ ಒಡ್ಡು ಬದುಗಳಿಲ್ಲ; ಜಾರು ಕೊರೆದಿಲ್ಲ ಪ್ರಕ್ಷುಬ್ಧ ಹೆಸರೇಕೋ ಕಡಲಿಗೆ ಸಮ ನಿಲುವು ತೊರೆದಿಲ್ಲ ಸುಡುಗೆಂಡದ ಮರಳು ಬರೆ ಇಟ್ಟಿದ್ದು ಚರಿತ್ರೆಯಲ್ಲಿಲ್ಲ ಬೆಳಕು ಒಳ ಕರೆಯದ ಕಾಡಿಗೆ ಕತ್ತಲು ಶಾಪವಲ್ಲ ತುಳಿದಾಡುವ ಹುಲ್ಲಲಿ ಹಾಲು ತುಳುಕಿಸಿದ್ದು ಪವಾಡವಲ್ಲ ಮಲ್ಲಿಗೆಯ ಬೆಳದಿಂಗಳಿಗೆ ಅಭೀಪ್ಸೆಯಿರದ ಕತ್ತಲಮವಾಸ್ಯೆ ಅವಳಿಯಾದದ್ದಕ್ಕೆ ಜಿಗುಪ್ಸೆಯಿಲ್ಲ ಪಕ್ಷ ಮಾಸ ತಿಥಿ ನಕ್ಷತ್ರ ಕ್ಷತಿಯೆಣಿಸದೆ ಸುಕ್ಷೇಮದಿ ಕ್ಷೇತ್ರಸ್ಥವಾಗೋಕೆ ತೊಡಕಿಲ್ಲ ಪಂಚೇಂದ್ರಿಯಗಳ ಯಜಮಾನನ ಎದೆಮೆದುಳಿಗೆ ಕೈ ಕಳೆದ ಬೀಗ ಜಡಿದದ್ದು ದಾಖಲೆಯಲ್ಲ
----------------------------------
ನೋಂದಣಿ ಐಡಿ : KPFS2-7692