Submission 3914

ಅಮ್ಮ ಎನ್ನುವ ಆಕಾಶ

ರಚನೆ : ರೋಹನಕುಮಾರ ಸುರೇಶ ಬಡಸದ

----------------------------------

ಅವಳ ಕಣ್ಣುಗಳಲ್ಲಿ ನಕ್ಷತ್ರಗಳ ಬೆಳಕು, ಅವಳ ಮಾತಿನಲ್ಲಿ ನಿಶ್ಶಬ್ದದ ಮಂತ್ರ. ನಿನ್ನ ತಾಳ್ಮೆ ಮರದ ನೆರಳಂತೆ, ಬಿಸಿಲಿನ ಹಾದಿಯಲಿ ಆರಾಮದ ಶ್ವಾಸ. ನಿನ್ನ ಕೈಯಲ್ಲಿದೆ ದೇವರ ಆಶೀರ್ವಾದ, ನಿನ್ನ ಮಡಿಲು ಶಾಂತಿಯ ತಾಣ. ಬಿದ್ದಾಗ ಎಬ್ಬಿಸುವ ನಿನ್ನ ನಗು, ದುಃಖದ ಹೊಗೆಯಲ್ಲಿ ಬೆಳಕಾದ ಪ್ರೀತಿ. ಅಮ್ಮ, ನೀನೆ ನನ್ನ ಪ್ರಥಮ ಗುರು, ನೀನೇ ನನ್ನ ಅಂತಿಮ ಆಶ್ರಯ. ನಿನ್ನ ಪ್ರೀತಿಯಲಿ ತೋಳಗುಟ್ಟಿದಾಗ, ಎಲ್ಲ ನೋವೂ ಮಾಯವಾಗುತ್ತದೆ. ನಿನ್ನ ಹೆಸರೇ ನನಗೆ ಭಕ್ತಿ, ನಿನ್ನ ಸ್ಮರಣೆಯೇ ನನ್ನ ಜೀವ.

----------------------------------

ನೋಂದಣಿ ಐಡಿ : KPFS2-7691

83
Votes
738
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top