ಚಡಪಡಿಕೆ
ರಚನೆ : ಗಾಯತ್ರಿ.ವಿ.
----------------------------------
ನೆನಪುಗಳ ನವಿಲುಗರಿಯಲ್ಲಿ, ಮುದ್ದು ಮುಖದ ಮೇಲೊಂದಿಷ್ಟು ಒಲವ ಬಳಿದುಬಿಡು. ಗುಳೆ ಹೊರಟ ಭಾವುಕತೆ, ಒಂದಿಷ್ಟು ಸೌಜನ್ಯಕ್ಕಾದರೂ...ಶರಣಾಗಲಿ. ಪ್ರೀತಿ ಬದುಕಿನ ಹಠವೇನಿಲ್ಲ. ಪುಟ್ಟ ಹಾಳೆಯ ಪ್ರಬುದ್ಧ ಸಾಲುಗಳ ಹೆಕ್ಕಿ ತೆಗೆದು,ಸಂಭಾಳಿಸುತ್ತಿರುವೆ. ಎಂಟನೇ ಅದ್ಭುತವಾದರೆ.., ಅದು ನಿನ್ನದೇ ಪಾಠ. ಕಲ್ಪನೆಯ ಕಥೆ ಸೃಷ್ಟಿಸಿ, ನೀ ಪತ್ರ ಬರೆದಾಗಲೆಲ್ಲ.. ನನ್ನ ಗೆಜ್ಜೆ ಘಲ್ ಅನ್ನುತ್ತಿದೆ.ಛೇಡಿಸಿದರೂ.., ತಬ್ಬುಗೆಯ ಸ್ಪರ್ಶ ಕೊಟ್ಟ ಪಾದಗಳನ್ನು ಬಹುಶಃ ಅದು ಮರೆಯುತ್ತಿಲ್ಲ.
----------------------------------
ನೋಂದಣಿ ಐಡಿ : KPFS2-7689