Submission 3906

ಪ್ರಶ್ನಾ ಹತ್ಯೆ

ರಚನೆ : ಡಾ.ಶರದ್ ಕುಮಾರ್ ಎಂ

----------------------------------

ಜನಿಸಿದ ಪ್ರಶ್ನೆಗಳ ಭ್ರೂಣ ಹತ್ಯೆ ಮಾಡದಿರಿ ಪ್ರಶ್ನೆಗಳ ಹೆತ್ತುತ್ತ ಜ್ಞಾನವನು ಪಡೆಯುತಿರಿ ಹೆತ್ತುತಿರಿ ಪ್ರಶ್ನೆಗಳ ದತ್ತು ಪಡೆಯುವುದೇಕೆ ಹೆತ್ತದ್ದು ಹೆಗಣವಾದರು ಬೇಡ ಹಿಂಜರಿಕೆ ಇರುವುದರ ಅರಿವಿನಲೆ ಆಯಸ್ಸು ಮುಗಿಯುತಿರೆ ನವಜ್ಞಾನ ನಿರ್ಮಾಣ ನಮ್ಮಿಂದ ಆಗದು ಪ್ರಶ್ನೆಗಳೆ ಜನಿಸದ ವಂಧ್ಯತ್ವ ಬಂದಿರಲು ಜ್ಞಾನ ಪಡೆವ ನಮ್ಮ ದಾರಿ ಅತಿ ದೂರ ಸಾಗದು ಅನಾಥವಾಗಿದೆ ಪ್ರಶ್ನೆಗಳು ಪೋಷಿಸುವ ಕೆಲಸ ನಮದಾಗಲಿ ಪ್ರತಿಯೊಂದು ಪ್ರಶ್ನಿಸುತ ಜ್ಞಾನವನು ಅರಸುತ್ತ ನಮ್ಮೆಲ್ಲರ ಜೀವನ ಸುಖದಿಂದ ಸಾಗಲಿ

----------------------------------

ನೋಂದಣಿ ಐಡಿ : KPFS2-7686

3
Votes
110
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top