ಜೀವನದ ಮೌಲ್ಯಗಳು
ರಚನೆ : ಅಕ್ಕಮಹಾದೇವಿ
----------------------------------
ಕಲಿಸಬೇಕಿದೆ ಇಂದು ಮಕ್ಕಳಿಗೆ, ಶಾಂತಿ, ಸಹನೆ, ಸಹಬಾಳ್ವೆಯ ಪಾಠವನು. ಕಲಿಸಬೇಕಿದೆ ಇಂದು ಮಕ್ಕಳಿಗೆ ಮೌನ ಬಂಗಾರದ ಮಹಿಮೆಯನ್ನು. ಎಲ್ಲಿಗೋ ಆಧುನಿಕತೆಯ ಜಗದ ನಾಗಾಲೋಟ ಜೋಡಿಸಬೇಕಿದೆ ಸಂಸ್ಕೃತಿ ಮೌಲ್ಯದ ಮೆಟ್ಟಿಲುಗಳ ನಡೆಯಬೇಕಿದೆ ಸಂಸ್ಕೃತಿ ನಾಗರಿಕತೆಗಳ ಸಹನೆಡಿಗೆ ಪಟ ಪಟ. ತಿಳಿಸಬೇಕಿದೆ ಮಕ್ಕಳಿಗೆ, ದುಡ್ಡಿನ ಮಹತ್ವವ ತಿಳಿಸಬೇಕಿದೆ ಮಕ್ಕಳಿಗೆ, ಹಸಿವಿನ ಪ್ರಾಮುಖ್ಯತೆಯ ಬೆಳೆಸಬೇಕಿದೆ ಮಕ್ಕಳಲಿ ಗಟ್ಟಿತನವ ಮೂಡಿಸಬೇಕಿದೆ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನವ.
----------------------------------
ನೋಂದಣಿ ಐಡಿ : KPFS2-7676