ಮೋಹಿನಿ
ರಚನೆ : ಲಕ್ಷ್ಮಣ್ ಕಣಕುಂಟ್ಲ
----------------------------------
ಮೈಕಾಂತಿಗೆ ಚಂದಿರನೇ ಮಂಕಾದ ಕಣ್ಕಾಂತಿಗೆ ಸೂರ್ಯನೇ ಓಡೋದ ನಗೆ ಶುದ್ಧಿಗೆ ಹಾಲೇ ಮಾಸಿದೆ ತ್ವಚೆಯ ಸುಗಂಧಕ್ಕೆ ಮಲ್ಲಿಗೆ ಮರುಗಿದೆ-ಮೋಹಿನಿ ನಡು ನುಳಿಯಲು ನಾಗರನೇ ಬೆರಗು ನಿನ ನಡಿಗೆಗೆ ಹಂಸಗಳೇ ಹಿಂದಕ್ಕೆ ತೊಲಗು ನುಡಿ ಕೋಗಿಲೆಗಳಿಗೆ ಮಿಗಿಲು ನಿನ ಅಕೃತಿಯಲ್ಲಡಗಿದೆ ಪ್ರಕೃತಿಯ ಸೊಬಗು-ಮೋಹಿನಿ ಕಣ್ಣೋಟ ದಶಲಕ್ಷ ಮನ್ಮಥ ಬಾಣಗಳು ಮೈಮಾಟ ಸಹಸ್ರ ಪುಷ್ಪಶರ ಗುಚ್ಛಗಳು ಕಣ್ಣೇಟು ಪುರುಷರ ಎದೆಗಾಕಿದ ಕೊಕ್ಕೆಗಳು ಕೇಶಪಟದ ರೋಮಗಳು ಮನಕಟ್ಟಿ ತರುವ ಮೋಹಪಾಶಗಳು-ಮೋಹಿನಿ ವಜ್ರಗಣ್ಣಿ, ಸುವರ್ಣವರ್ಣಿ,ಸಂಪಿಗೆ ನಾಸಿಕೆ, ಗುಲಾಬಿ ಅದರಿ,ನವಿಲ ಸೀರಿ, ನಕ್ಷತ್ರ ಪುಂಜದ ಕಿವಿಯೋಲಿ-ಮೋಹಿನಿ
----------------------------------
ನೋಂದಣಿ ಐಡಿ : KPFS2-7675