Submission 3866

ಯುದ್ಧಕ್ಕೆ ಅರೆಯಬೇಕು ಮದ್ದು

ರಚನೆ : ಗಿರಿಜಾಶಂಕರ್ ಜಿ ಎಸ್

----------------------------------

ಮುಗಿಲತ್ತ ಮಗುವೊಂದು ನೋಡುತ್ತಿದೆ ಅಮ್ಮಾ, ನಮ್ಮೂರಿಗೆ ಎಷ್ಟೊಂದು ಲೋಹದ ಹಕ್ಕಿಗಳು ನಾನು ಹೋಗುತ್ತೇನೆ ಅಮ್ಮಾ! ನಾನದರಲ್ಲಿ ಸವಾರಿ ಮಾಡುತ್ತೇನೆ. ಅದಕ್ಕೆ ಗೊತ್ತಿಲ್ಲ, ಕ್ಷಣಾರ್ಧದಲ್ಲೆ ಲೋಹದ ಹಕ್ಕಿಗೆ ಆಹಾರವಾಗುತ್ತೇನೆಂದು. ಅಲ್ಲೊಬ್ಬ ಮಾಧ್ಯಮ ವರದಿಗಾರ ಹಾತೊರೆಯುತ್ತಿದ್ದಾನೆ. ರಕ್ತ ಚೆಲ್ಲುವ, ದೇಹ ಛಿದ್ರವಾಗುವ ದೃಶ್ಯಾವಳಿ ಸೆರೆಗೆ ತುಂಡು ತುಂಡಾಗಿರುವ ಮೂಳೆ ಮಾಂಸದ ಮುದ್ದೆ, ನೆತ್ತರ ಕಾಲುವೆ ಹೆಣದ ರಾಶಿ ತೋರಿಸಲು ನಾನೇ ಮೊದಲಿಗ, ನಾನೇ ಮೊದಲಿಗ. ಸುದ್ದಿಯಲ್ಲಿ ನಾನೇ ಮೊದಲಿಗ. ಜೀವವಿಲ್ಲದ ದೇಹ ಮಣ್ಣಾಗಲು ಗಡಿ ಇಲ್ಲ ಇನ್ನು ತನ್ನದೆನ್ನುವ ಅಹಂಕಾರಕ್ಕೆ ಗಡಿ ಎಲ್ಲಿ? ಇದ್ದುಬಿಡಲಿ ಜಗದ ಮಂದಿ ತಮ್ಮದೆ ಸರಹದ್ದಿನಲ್ಲಿ ಬೆಳಗಲಿ ಧರ್ಮ ದೇವರು ದೇಶಾಭಿಮಾನ ಎದೆಯಲ್ಲಿ ವಿಶ್ವಬಂಧುತ್ವ ಜಾತಿ ಧರ್ಮ ದೇಶಗಳನು ಬೆಸೆಯಲಿ.

----------------------------------

ನೋಂದಣಿ ಐಡಿ : KPFS2-7660

1
Votes
145
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top