Submission 3864

ಹಂಗೇಕೆ?

ರಚನೆ : ಡಾ. ವೀಣಾ ಪಿ.

----------------------------------

ಇಹದ ಅಂಗೈಯ ಹುಣ್ಣಿಗೆ ಕನ್ನಡಿಯ ಹಂಗೇಕೆ..? ಮೆರುಗು ಮೌನದ ಮಂದಿರಕೆ ಮಾತಿನ ಹಂಗೇಕೆ..? ಶುದ್ಧ ಶ್ವೇತದ ಒನಪಿಗೆ ರಂಗಿನ ಹಂಗೇಕೆ..? ಅಗ್ನಿಗೆದೆಯೊಡ್ಡಿ ಗೆದ್ದ ಪಾವನೆಗೆ ಪತಿತತೆಯ ಹಂಗೇಕೆ..? ರಾಗ-ದ್ವೇಷಗಳಳಿದ ವಿರಕ್ತೆಗೆ ಅನುರಕ್ತಿಯ ಹಂಗೇಕೆ..? ಬಂಧನವ ಕಳಚಿಟ್ಟ ದಿಟ್ಟ ಪರಿವ್ರಾಜೆಗೆ ಸಂಘದ ಹಂಗೇಕೆ..? ಬದ್ಧ ಬದುಕ ಧನ್ಯಾತ್ಮ ಭಾವಕ್ಕೆ ಸಾವಿನಾಚೆಯ ಮುಕ್ತಿಯ ಹಂಗೇಕೆ?

----------------------------------

ನೋಂದಣಿ ಐಡಿ : KPFS2-7659

451
Votes
2,646
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top