Submission 3858

ಜಂಗಮ ಸ್ಥಾವರ

ರಚನೆ : ರಾಘವೇಂದ್ರ ಎನ್ ಬಿ

----------------------------------

ನಿಂತರೆ ಕೊಚ್ಚೆ ಹರಿದರೆ ತೀರ್ಥ ಅಪ್ಪ ನಿಂತಲ್ಲೇ ನಿಂತಿದ್ದ ನಿಶ್ಚಲವಾಗಿ , ನಿರುಮ್ಮಳನಾಗಿ, ಮಳೆಯನ್ನೇ ನೆಚ್ಚಿಕೊಂಡ ಕೆರೆಯಂತೆ ನನ್ನದು ನದಿಯಾಗುವ ಉಮೇದು ಹಳ್ಳ ಕೊಳ್ಳ ಸೇರಿ ಹರಿದೆ, ತಗ್ಗು ದಿಣ್ಣೆ ಹತ್ತಿ ಇಳಿದೆ , ಗರಿ ಬಿಚ್ಚಿಕೊಂಡು, ಗುರಿ ನೆಚ್ಚಿಕೊಂಡು. ಕನಸುಗಳ ಹೆಣ ತೇಲಿದವು ಅಕಾಲ ಮರಣದಿಂದ ತಳಕಾಣುವಷ್ಟು ನಿಚ್ಚಳ ನಾಗಿದ್ದ"ಅಪ್ಪ" ನಾನೇ ಬಗ್ಗಡವಾದೆ ! ಕೊನೆಗೊಮ್ಮೆ ಉಪ್ಪು ಕಡಲ ಸೇರಿ ಉಪ್ಪಾದೆ ,ಮುಪ್ಪಾದೆ

----------------------------------

ನೋಂದಣಿ ಐಡಿ : KPFS2-7656

1
Votes
184
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top