ನಾ ಶಿಲೆ ನನ್ನವಳೇ ಶಿಲ್ಪಿ
ರಚನೆ : ಸತೀಶ್ ಎಂ
----------------------------------
ನೀ ಕವಿಯಾಗೆಂದೇ ರಸಸ್ವಾದವಿಲ್ಲದ ನನ್ನಲ್ಲಿ ಪದ ಮೂಡಲಿಲ್ಲ ನೀ ಚಿತ್ರಕಾರನಾಗೆಂದೇ ಸ್ವಾಧೀನವಿಲ್ಲದ ಬೆರಳಿಗೆ ರೇಖೆ ಎಳೆಯಲಾಗಲಿಲ್ಲ ನೀ ಸಂಗೀತಗಾರನಾಗೆಂದೇ ಬೆರಳಾಡಿದ ಪಿಟಿಲೊಳಗೆ ಶಬ್ದ ಸಂಚಲನವಾಗಲಿಲ್ಲ ಗಾಯಕ ನೀನಾಗೆಂದೇ ಯತಿ ಸ್ವರಗಳೇ ನಶ್ವರವಾದ ಒಡಲೊಳಗೆ ದನಿಯೇಕೊ ಮೂಡಲಿಲ್ಲ ರಸಿಕ ನೀನಾಗೆಂದೇ ಅರಸಿಕತನ ರಾರಾಜಿಸಿದ ತನುವಿನೊಳಗೆ ರಾಗವೇಕೋ ಪುಟಿಯಲಿಲ್ಲ ನೀ ಕೋಪಿಸಿದೆ, ಮುಳಿದೆ, ಕಣ್ಣೀರ ಸುರಿಸಿ ಬೆನ್ನ ತಿರುಗಿಸಿದೆ ನಿನ್ನ ಸಮಾಧಾನಿಸಲು ನಿನ್ನ ಹೊಗಳಿದೆ ನಾ ಕವಿಯಾದೆ ನಿನ್ನ ಚಿತ್ರಪಟ ಬಿಡಿಸಿ ಆರಾಧಿಸಿದೆ ನಾ ಚಿತ್ರಕಾರನಾದೆ ನಿನ್ನ ನೆನೆದು ರಾಗವೆಳೆದೆ ನಾ ಸಂಗೀತಗಾರನಾದೆ ನಿನ್ನತನ ನೆನೆದು ನಾ ಹಾಡಿದೆ ನಾ ಗಾಯಕನಾದೆ ಏನು ಅಲ್ಲದ ನನ್ನ ನೀ ಏನೋ ಮಾಡಿದೆ ನಿನ್ನ ಪ್ರೇಮಾನುರಾಗ ನೋಡಿ ನಾ ರಸಿಕನಾದೆ ನೀ ಹೇಳದಿದ್ದರೂ ನಿನ್ನ ಪ್ರೇಮ ದೇವತೆಯಾಗಿಸಿ ನಾ ಪ್ರೇಮ ಪೂಜಾರಿಯಾದೆ
----------------------------------
ನೋಂದಣಿ ಐಡಿ : KPFS2-7655