Submission 3828

ಮತ್ತೆ ಹುಟ್ಟಿ ಬಾ ವಿಶ್ವ ಮಾನವ

ರಚನೆ : ವಿದ್ಯಾ ಶ್ರೀ ಬಿ

----------------------------------

ಕರುನಾಡ ಗುರುವೇ ನೀ ಎಲ್ಲಿರುವೆ ನೀನಿರುವೆ ಎಲ್ಲರ ಮನೆಯಲ್ಲಿ ಮನೆಯವರ ಮನದಲ್ಲಿ ನೀ ಜನಿಸಿದೆ ಮಲೆನಾಡ ಮಡಿಲಲ್ಲಿ ಜಲಸಿರಿಯ ಒಡಲಲ್ಲಿ ವನಸಿರಿಯ ತವರಲ್ಲಿ ಕುಪ್ಪಳ್ಳಿ ಗ್ರಾಮದಲ್ಲಿ ನೀ ನೀಡಿದೆ ಮನುಕುಲಕೆ ವರದಾನ ನಿನ್ನ ನೆನೆಯುತಿಹರು ಕರುನಾಡ ಕುಡಿಗಳು ಭಕುತಿ ಭಾವಗಳೊ0ದಿಗೆ ನೀ ರಚಿಸಿದ ಕೃತಿಗಳಿಗೆ ದೊರಕಿತು ಪ್ರಶಸ್ತಿಗಳ ಸರಮಾಲೆ ಕರುನಾಡು ಸೇರಿತು ನಿನ್ನಿಂದ ವಿಶ್ವ ಭೂಪಟದ ಸಾಲು ನೀ ಕೊಟ್ಟೆ ವಿಶ್ವಕ್ಕೆ ಓ ನನ್ನ ಚೇತನದ ಸಂದೇಶ ಜನ ಕೊಟ್ಟರು ನಿನ್ನ ಮಕುಟಕೆ ವಿಶ್ವ ಮಾನವನ ಕಿರೀಟ

----------------------------------

ನೋಂದಣಿ ಐಡಿ : KPFS2-7632

43
Votes
590
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top