Submission 3816

ಬಾ ಬೆಳಕೇ

ರಚನೆ : ದಿಲೀಪ ಹೆಗಡೆ

----------------------------------

ಮುಗಿಲ ಬೀದಿಯಲಿ ಉಷೆಯ ಹಾದಿಯಲಿ ನಡೆದು ಬಾ ಬೆಳಕೇ ಹಿಮದ ಗಿರಿ ಹಾದು ತಮದ ಮನೆ ಜಾಡು ಹಿಡಿದು ಬಾ ಬೆಳಕ ಜಗ ಕಣ್ಣ ತೆರೆವಂತೆ ಹೂ ಅರಳಿ ನಗುವಂತೆ ನೋವೆಲ್ಲ ಮರೆವಂತೆ ಹೊಸಕನಸು ಮೊಳೆವಂತೆ ಮನವು ಬಾನಾಡಿಯಂತೆ ತೇಲಾಡಿ ತಾ ಹಾಡಿ ನಲಿವಂತೆ ಅಳಿಸಿ ಮಿಥ್ಯವನು ತಿಳಿಸಿ ಸತ್ಯವನು ಭಯವ ಸಂಹಾರಿಸು ಕಲಿಸಿ ತತ್ವವನು ಸಹಜ ಸತ್ವವನು ವಿನಯ ಭಾವ ನೆಲೆಸು ಜಡಚಿತ್ತಕೂ ಗರಿ ಮೂಡಿಸು ಗುರುವಾಗಿ ನೀ ಗುರಿ ಸೇರಿಸು ಜನ್ಮ ಜನ್ಮಗಳ ಪಾಪ ಮುಕ್ತಿಗಿಹ ಹಾದಿ ನೀ ಹಿಡಿಸು ಅಂತರಾಳದೊಳ ಅಂಧಕಾರವನು ಭರದಿ ಹಿಮ್ಮೆಟ್ಟಿಸು ಸಕಲ ಮೌಢ್ಯಗಳ ಜಡತೆ ಜಾಡ್ಯಗಳ ಶರಧಿ ನೀ ದಾಟಿಸು ಅಜ್ಞಾನವ ಮರೆಯಾಗಿಸು ಸುಜ್ಞಾನದ ಸುಧೆಯೂಡಿಸು ಕಾಮ ಕ್ರೋಧಾದಿ ಆರು ವೈರಿಗಳ ಸೆರೆಯ ನೀ ಬಿಡಿಸು

----------------------------------

ನೋಂದಣಿ ಐಡಿ : KPFS2-7626

0
Votes
121
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top