Submission 3814

ಅ...ಅಂ ವರೆಗೆ ಅಮ್ಮ...

ರಚನೆ : ಡಾ.ಸಚಿನ್ ಕೆ ಪಿ

----------------------------------

ಅಮ್ಮಾ ಎಂಬ ಪದ ನಾ ನುಡಿದ ಮೊದಲ ಪದ ಆಕಳಿಸುವ ನನ್ನ ಬಿಗಿದಪ್ಪಿದೆ ತೆರೆಯುತ ಎದೆಯ ಕದ ಇಣುಕಿ ನೋಡುತಲಿದ್ದೆ ಎನ್ನುತಾ ನನ್ನ ಮುದ್ದಿನ ಕಂದ ಈಜುವಾಗ ಅಂಬೆಗಾಲಲಿ ನೋಡುವುದೇ ನಿನಗೆ ಚಂದ ಉತ್ಸವವೋ ಉತ್ಸಾಹವೋ ನಿನಗೆ ನಾ ನಲಿವಾಗ ಊಟವಿಲ್ಲದಿದ್ದರೂ ಎದೆಹಾಲುಣಿಸುತಿದ್ದೆ ನಾ ಅಳುವಾಗ ಎಣ್ಣೆ ಅಭ್ಯಂಜನ ದಿನಾ ಬಿಸಿಲ ಮುಂಜಾನೆ ಏಳದಿದ್ದರೂ ಬಿಡಲೊಲ್ಲೆ ತೆಗೆಯುತ ಕಂಬಳಿ ಮೆಲ್ಲನೆ ಐಶ್ವರ್ಯ ಸಂಪಾದಿಸಿದೆ ಅನುಭವಿಸಲಿ ಮಗನೋರ್ವನೆ ಒಂಬತ್ತು ತಿಂಗಳು ನಿನ್ನ ಒಡಲಲ್ಲಿ ಹೊತ್ತು ಸಾಕಿದೆ ಓ ದೇವರೇ! ಕರೆತಂದಳು ಧರೆಗೆ ನೋವು ಎನ್ನದೆ ಔದಾರ್ಯ ಮೆರೆದೆ ಜೀವನದಲ್ಲಿ ಏನನ್ನು ಬಯಸದೆ ಅಂಕಿ ಅಕ್ಷರಗಳ ಕಲಿಸಿದೆ ಬೆರಳ ಒತ್ತಿ ಹಿಡಿಯುತ ಕಣ್ತೆರೆಸಿದೆ ಕರುನಾಡಲ್ಲಿ ಕನ್ನಡದಲ್ಲೇ ಉಸಿರಾಡಿಸುತ

----------------------------------

ನೋಂದಣಿ ಐಡಿ : KPFS2-7622

0
Votes
126
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top