Submission 3808

ನನ್ನ ಕವಿತೆ

ರಚನೆ : ಡಾ.ನಾಗರಾಜ ಹೀರಾ

----------------------------------

ಹಸಿದ ಹೊಟ್ಟೆಗಳಿಗೆ ತೃಪ್ತಿ ಕೊಡುವ ಆಳುವ ದೊರೆಗಳಂತೆ ಖಾತ್ರಿ ನೀಡುವ ಖಾಚಿತ್ಯದ ಹೊಂಗನಸಲ್ಲ ನನ್ನ ಕವಿತೆ ಲೋಕದ ಜಂಜಡಗಳಿಗೆ ಜರ್ಜರಿತವಾಗಿ ಸವೆದುಹೋದ ಹೆಣ್ಣುಗಳ ಸಾಂತ್ವನವಾಗಿ ಸಮಾಧಾನಿಸುವ ಶಾಸನವಲ್ಲನನ್ನ ಕವಿತೆ ಬದುಕಿಗಾಗಿ ಅಲೆಮಾರಿಯಾಗಿರುವ ಯುವಜನತೆಯ ಆಶಾಕಿರಣವಾಗಿರಿಸುವ ಆದೇಶದ ಭದ್ರತೆಯ ಪತ್ರವಲ್ಲ ನನ್ನ ಕವಿತೆ ಜಾತಿಯ ಬೇರುಗಳನು ಅಲ್ಲಾಡಿಸಿ ಪ್ರೀತಿಯ ಗೋಡೆಗಳನು ನಿರ್ಮಿಸಿ ಧರ್ಮದ ಕಟ್ಟೆಗಳನು ಕತ್ತರಿಸುವ ಮಾನವತೆಯ ಹೂವಾಗಿ ಅರಳಿಸುವ ಉಳುಮೆಯ ಹೂ ತೋಟ ನನ್ನ ಕವಿತೆ

----------------------------------

ನೋಂದಣಿ ಐಡಿ : KPFS2-7618

27
Votes
283
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top