Submission 3776

ಪ್ರ(ವಿ)ಕೃತಿ

ರಚನೆ : ಶ್ರೀಕಾಂತ್

----------------------------------

ಹಸಿರು ನಾಡಿನೊಳಗೆ ಕಪ್ಪು ಹೊಗೆ ಮನೆ ಮಾಡಿತು, ಹೂವಿನ ನಗುವಿನ ಮೇಲೆ ಪ್ಲಾಸ್ಟಿಕ್ ಪರಿಮಳ ಬಿತ್ತು. ನದಿ ಹಾಡುತಿದ್ದಳು,ಈಗ ಕಣ್ಣೀರು ಸುರಿಸುತ್ತಾಳೆ, ಮರ ಕಡಿಯುವ ಕೈಗೆ ಕರುಣೆ ತೋರುತ್ತಾಳೆ. ಪರ್ವತದ ಹೃದಯಕ್ಕೆ ಬೊಮ್ಮನ ಕಲ್ಲು ಬಿದ್ದಿದೆ, ಹಕ್ಕಿಯ ಕೂಗಿನಲ್ಲಿ ಈಗ ಯಂತ್ರದ ಶಬ್ದ ಕೇಳುತ್ತಿದೆ. ಗಾಳಿಯ ತಂಪು ಬಿಸಿಗಾಳಿಯಾಯಿತು, ಮಾನವನ ವಿಕೃತಿಯೇ ಪ್ರಕೃತಿಗೆ ಮಾರಕವಾಯಿತು. ಹೂವಿಗೆ ಬಣ್ಣ, ಮಣ್ಣಿಗೆ ಜೀವ ಕೊಟ್ಟ ತಾಯಿ, ಇಂದು ಅವಳ ಉಸಿರಿಗೇ ವಿಷದ ಕಾಯಿ. ಕಾಡು ಕಿತ್ತು ಕಟ್ಟಿದ ಎತ್ತರದ ಮನೆ, ಬದುಕುತ್ತಿದ್ದಾನೆ ಶಾಂತಿಯೇ ಇಲ್ಲದನೆ. ವಿಕೃತಿ ನಾವೇ, ಪ್ರಕೃತಿಯ ಅಂತರಾಳದಲಿ, ಅವಳು ಮೌನ, ನಾವು ತಪ್ಪಿನ ಸಾಕ್ಷಿಗಳಲಿ"

----------------------------------

ನೋಂದಣಿ ಐಡಿ : KPFS2-7596

10
Votes
183
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top