ತೊರೆದು ಜೀವಿಸಬಹುದೇ?
ರಚನೆ : ಚೈತ್ರ. ವಿ. ರಾಮ್
----------------------------------
ತೊರೆದು ಜೀವಿಸಬಹುದೇ ತಾಯಿ ನಿನ್ನ ಉಸಿರನು ಮರೆತು ಬಾಳಬಹುದೇ ತಂದೆ ನಿನ್ನ ಹೆಸರನು ಹಾಡೊ ಹಕ್ಕಿಯ ಕೊರಳು ಬಿಗಿದಿದೆ ಕಾಡೊ ಚುಕ್ಕಿಯ ಇರುಳು ಕವಿದಿದೆ ಒಡಲ ಕಿಚ್ಚಿಗೆ ತಂಪನೆರೆಯುವ ಮಡಿಲು ಎಲ್ಲಿದೆ? ಓ ತಂದೆ ತಾಯೇ, ಆಲಿಸಿಲ್ಲಿ ಕರುಳ ಬಳ್ಳಿಯ ನೀಗದಾ ರೋಧನೆ! ಯಾರೊ ಹರಡಿದ ವಿಧಿಯ ಹಮ್ಮಿದೆ ಜಾರೊ ಕೊರಡಿನ ಬಾಳ ಬಿಮ್ಮಿದೆ ಕೊಲುವ ನೆನಪಿಗೆ ಸೊಂಪ ಹಾಸುವ ಕರವು ಎಲ್ಲಿದೆ? ಓ ತಂದೆ ತಾಯೇ, ನೋಡಿರಿಲ್ಲಿ ಸೋತು ಹೋದಾ ಬದುಕ ವೇದನೆ! ಬಿಕ್ಕೊ ಪವನದಿ ಪಿತನ ನಂಬಿಕೆ ಉಕ್ಕೊ ಕವನದಿ ಜನನಿ ಅಂಬಿಕೆ ಕರೆದ ಒಡನೆಯೇ ದುಗುಡ ತೊಡೆವ ಜೀವ ಎಲ್ಲಿದೆ? ಓ ತಂದೆ ತಾಯೇ, ಕೇಳಿರಿಲ್ಲಿ ನೀವೆ ಇರದ ಗೆಲುವು ಯಾವ ಸಾಧನೆ?
----------------------------------
ನೋಂದಣಿ ಐಡಿ : KPFS2-7590