ಪದಗಳಲ್ಲಿ ಪ್ರಾಣ
ರಚನೆ : ಸಹನಾ ಪಾಟೀಲ
----------------------------------
ಪದಗಳಲ್ಲಿ ಪ್ರಾಣ ಇರದಿದ್ದರೆ, ಅವು ಕಾಗದದ ಅಕ್ಷರ ಮಾತ್ರ. ಮನದ ನಾದವಿಲ್ಲದ ಕವಿತೆ, ಹೃದಯದ ಬಾಗಿಲು ತಟ್ಟಲಾರದು. ಕಾವ್ಯದ ಮೂಲ ನುಡಿಯಲ್ಲ, ಅದರ ಹುಟ್ಟೇ ಭಾವನೆಗಳಲ್ಲಿ. ಒಂದು ಕಣ್ಣೀರು ಸಾಲು ಬರೆಯಬಹುದು, ಒಂದು ನಗು ಹಾಡು ಹುಟ್ಟಿಸಬಹುದು. ಕವಿಯ ಹೃದಯ ಗಗನದಂಥದು, ಅದರೊಳಗಿದೆ ಎಲ್ಲ ಬಣ್ಣಗಳ ವಸಂತ. ದುಃಖವನ್ನೂ ಪ್ರೀತಿಯನ್ನೂ, ಪದಗಳಲ್ಲಿ ನಿಟ್ಟುಸಿರು ತೊಡಿಸುತ್ತಾನೆ ಕವಿ. ಕವಿತೆ ಬರೆಯುವುದಲ್ಲ, ಬದುಕುವುದು, ಪ್ರತಿ ಶಬ್ದವನ್ನೂ ಅನುಭವಿಸುವುದು. ಮನಸು ಹಂಚಿದಾಗ ಮಾತ್ರ, ಪದಗಳು ಜೀವ ಪಡೆಯುತ್ತವೆ.
----------------------------------
ನೋಂದಣಿ ಐಡಿ : KPFS2-7589