Submission 3756

ತಂಗಿ

ರಚನೆ : ಶರೀಫ್ ವಾಲಿಕರ್

----------------------------------

ವಾಡಿಕೆ ರೂಡಿಕೆಯ ಮಧ್ಯ ತನ್ನ ಆಸೆಗಳನು ಬಿಟ್ಟವಳು ತನ್ನೆಲ್ಲ ಹಿರಿಯರ ನಡುವೆ ಬದುಕಿನ ಜವಾಬ್ದಾರಿ ಹೊತ್ತವಳು ಓದು ಬಿಟ್ಟಳು, ಕನಸ ಸುಟ್ಟಳು, ತನಗೇಕೆ ಹೀಗೆ ಎಂದು, ಎಂದೆಂದೂ ಪ್ರಶ್ನಿಸದವಳು ಮನೆಗೆ ಭಾರ ಎಂದು ಭಾವಿಸಿದವರ ಮಧ್ಯ ಬೇರೆಯವರ ಪಾಲಾಗಿ ಬಿಟ್ಟಳು. ಟೀಕೆಗಳ ಹೊತ್ತಳು, ರಾಜಕುಮಾರನ ಸ್ವಪ್ನವ ಮರೆತವಳು, ಗುಲಾಮಳಂತೆ ಇದ್ದರೂ ಮಹಾರಾಣಿಯಂತೆ ತೋರುವಳು. ಹೆಣ್ಣೆಂದರೆ ಹುಣ್ಣಲ್ಲ ಎಂದು ತೋರಿಸಿದವಳು ವಾಡಿಕೆ ರೂಡಿಕೆ ಮಧ್ಯ ಅವಳು ಕೊನೆ ಸಾಲಲ್ಲೇ ಉಳಿದು ಬಿಟ್ಟಳು.

----------------------------------

ನೋಂದಣಿ ಐಡಿ : KPFS2-7580

0
Votes
120
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top