Submission 3726

ಎಲ್ಲರಂತಲ್ಲ ನಾನು

ರಚನೆ : ಅಶ್ವಿನಿ ಪಿ

----------------------------------

ಎಲ್ಲರಂತಲ್ಲ ನಾನು... ಕೋಪಬಂದಾಗ ಮಾತಿಗಿಂದ ಮೊದಲು ಕಣ್ಣೀರಿಡುವವಳು ನಾನು... ನೋವಲ್ಲಿದರು ನಗುವವಳು ನಾನು... ಮನೆಯವರು ಹಾಕಿದ ವೃತ್ತವನ್ನು ವಿರೋಧಿಸಿದರು ಪಾಲಿಸುತ್ತಿರುವವಳು ನಾನು... ದೇವಸ್ಥಾನಕ್ಕೆ ಕರೆದರೂ ಹೂಂ ಎಂದು ಹೇಳುವ ಮೊದಲು ಮನೆಯಲ್ಲಿರುವ ಎಲ್ಲರನ್ನೂ ಒಪ್ಪಿಸಬೇಕಾದವಳು ನಾನು... ಪ್ರತೀ ಹಣಕಾಸಿನ ವಿಷಯದಲ್ಲೂ ಮನೆಯವರ ಮುಂದೆ ಕೈಚಾಚಿ ನಿಂತವಳು ನಾನು... ಸ್ವಇಚ್ಛೆ- ಸ್ವಪ್ರೀತಿ ಸುಟ್ಟು ಬದುಕುತ್ತಿರುವವಳು ನಾನೂ... ನಾನು ಎನಲಾರೆ ಯಾವುದೂ ನನ್ನದಲ್ಲ ಏಕೆಂದರೆ ಎಲ್ಲರಂತಲ್ಲ ನಾನು...

----------------------------------

ನೋಂದಣಿ ಐಡಿ : KPFS2-7560

57
Votes
392
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top