Submission 3724

ನಗುವು ಮತ್ತು ಅಳುವು

ರಚನೆ : ಭೂಷಣ್ ಬಬನ್ನಾವರ್

----------------------------------

ಅತ್ತ ಬಾನು, ಇತ್ತ ಮಣ್ಣು, ನಡುವಿನಾಟವೇ ಬದುಕು, ಕಣ್ಣೆಲ್ಲ ಕಣ್ವಳಿದು ಕಂಡದರ ಸೊಗವೇ ನಗು -ಕು ಹೂವರಳಿದಾ ಹಾದಿಯಲಿ ಹಾಡೊಂದ ಹಾಡಬಹುದು, ಸುತ್ತ ಮುತ್ತ ಜನ ಕೂಡಿ, ನಗೆಯಾಟ ಆಡಬಹುದು. ಹೊನ್ನ ಕಳಸದ ನಗುವೇ, ಜಗದ ಮುಂದೆ ಒಪ್ಪುವಂಥಾದ ಮನಸಿನ ಅಂಗಳದ ಮುತ್ತು, ಹೊರಗೆಲ್ಲ ಹರಡುವಂಥಾದ ಬೆಳಕಿನ ಒಡನಾಟ ಇದು ಹಗುರದಂಥಾ ನೋಟ, ಬೆರಗಿನ ಸಂತೆ ಇದು, ನಲಿಯೋಕೆ ತಂತೀ ತೂಟ. ಆದರೆ, ಎಲೆ ಗೆಳತಿ, ಎಲೆ ಗೆಳೆಯಾ, ಈ ಮಾತು ಕೇಳು, ಹೃದಯದ ಗೂಡಿನೊಳಗಿನಾ ಗುಟ್ಟು ಹೇಗೆ ಹೇಳು? ಒಳಗೆ ಅಲೆ ಅಲೆಯಾಗಿ, ಕಟ್ಟಿಕೊಂಡದ್ದೆ ಅಳುವು, ನೂರರ ಮಧ್ಯವಿದ್ದರೂ ನೀನೊಬ್ಬನೇ ಸಲುವು. ನಗುವಿನ ಮಾಲೆ ಹಾಕಿ, ಬಾರೆಲೋ ಜೀವ ಬಾರೆ ಅಳುವಿನ ಹಾಡು ನಿನಗೆ, ಯಾರ ಮುಂದೆ ಹೇಳಲಾರೆ!

----------------------------------

ನೋಂದಣಿ ಐಡಿ : KPFS2-7559

0
Votes
139
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top