Submission 3718

ಕಲಿಯುಗದಲಿ ಬದುಕಲು ಕಲಿ

ರಚನೆ : ಯತೀಶ್ ಡಿ

----------------------------------

ಸಂಬಂಧದ ಬಂಧ ಗಂಧದ ಸುಗಂಧ ಸವೆದರೆ ಮಾತ್ರ ಚೆಂದ ಈ ಅನುಬಂಧ ಅನುಕೂಲ ಬಯಸುವ ಬಂಧು ರಕ್ತ ಸಂಬಂಧಿಯಾದರೂ ಅಸಿಂಧು ಅರ್ಥಿಕವಾಗಿದ್ದರೆ ನಂಟಿನ ನೆಂಟ ಗಂಟಿಗೆ ನಂಟಾದರೆ ಮುಂದಿದೆ ಸಂಕಟ ಚೂರು ಪಾರು ಅರಿವು ಇಲ್ಲದ ಧರ್ಮ ಅಂಟಿಸಿಕೊಂಡಿದ್ದ ಊರಿನವರ ಕರ್ಮ ಜೇನಸಿಹಿಯಂತೆ ಕೆಡದ ದ್ರವವಾಗು ಕಸದೊಳಗೆ ಇದ್ದರೂ ವಜ್ರದ ಘನವಾಗು ಜನ್ಮಕ್ಕಂಟಿದ ವ್ಯಾಧಿ ಕರ್ಮಕ್ಕಂಟಿದ ಬಾಧೆ ಮರ್ಕಟಮನದ ದುರ್ಗಂಧ ಕಲ್ಮಶ ತುಂಬಿದ ಪ್ರಬಂಧ ಕನ್ನಡಿ ಮೇಲಿನ ಧೂಳು ಬಡವರ ಕಂಬನಿ ಗೋಳು ಮರಕಡಿದು ರೋಡ್ ಮಾಡೋ ಬಾಳು ನನಗೋ ಬರೀ ಪ್ರಾಸ ಬರೆಯೋ ಗೀಳು ಯತಿಸ್ಕಂದನ ಪದ್ಯದೊಳ್ ತಿರುಳು ಹುಡುಕುವರಿಲ್ಲ

----------------------------------

ನೋಂದಣಿ ಐಡಿ : KPFS2-7555

10
Votes
239
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top