Submission 3686

ಮೊದಲ ಗುರು

ರಚನೆ : ಶಿವಯೋಗಯ್ಯ ಆರ್ ಎಚ್

----------------------------------

ಅತ್ತಾಗ ಕಣ್ಣಿರ ಒರೆಸಿ ಪ್ರೀತಿಯಲ್ಲಿ ಜಗವ ಮರೆಸಿ ಬಾಲ್ಯವ ಹೇಳಿ ಕೊಟ್ಟ ಮೊದಲ ಗುರು ತಾಯಿ ಅಲ್ಲವೆ!. ಸಮಯಕ್ಕೆ ಸರಿಯಾಗಿ, ಹೆಗಲಿಗೆ ಹೆಗಲಾಗಿ, ಜಾತಿ ಬೆದವ ತೊರೆದು ಸ್ನೇಹದಿ ಜೊತೆ ನಡೆದ ಬಾಲ್ಯದ ಗೆಳೆಯ ಮೊದಲ ಗುರು ತಾನಲ್ಲವೆ.! ಅಜ್ಞಾನವ ತೊರೆದು ಜ್ಞಾನದ ಜೊತಿಯ ಹಚ್ಚಿ ಬದುಕಿಗೆ ಅರ್ಥವಾದವ ಗುರು ತಾ ಮೊದಲಲ್ಲವೆ! ನಕ್ಕಾಗ ನಗುವಾಗಿ, ಅತ್ತಾಗ ಅಳುವಾಗಿ ನನ್ನ ಜೀವನವೆ ತಾನಾಗಿ, ದೇಹದ ಅರ್ಧ ಭಾಗವನ್ನೇ ಪಡೆದ ಅರ್ದಾಂಗಿ ಹೆಣ್ಣು ಮೊದಲ ಗುರು ತಾನಲ್ಲವೆ! ಮನೆಯ ಆಧಾರವಾಗಿ, ದುಃಖ ನುಂಗಿ ಖುಷಿಯಿ ಹಂಚಿ, ನಾ ತಂದೆಯಾದಾಗ ತಂದೆಯ ಸ್ಥಾನವೆನೆಂದು ತಿಳಿಸಿದ ಜಿವನದೊಡೆಯ ನನ್ನ ಪಿತ್ರು ಮೊದಲ ಗುರು ತಾನಲ್ಲವೆ..!

----------------------------------

ನೋಂದಣಿ ಐಡಿ : KPFS2-7522

17
Votes
188
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top