ಬಯಸದ ವರ ಬಾಲ್ಯ
ರಚನೆ : ವೀಣಾ ಹನುಮಂತಗೌಡ
----------------------------------
ಕಾಲಚಕ್ರದ ಅಡಿಯಲ್ಲಿ ವರ್ಷಗಳು ಉರುಳಿದೆ ನೆನಪುಗಳು ಅಂತರಂಗದೀ ಅಚ್ಚಾಗಿದೆ ಮೈದಾನದೀ ಹೊತ್ತು ಕಳೆದರೂ ಮುಗಿಯದ ಆಟ ನಿದ್ದೆಗೆ ಆಹ್ವಾನವಿತ್ತಂತಿರುವ ಪಾಠ ಇರಲಿಲ್ಲ ಎಂದಿಗೂ ನಗುವಿಗೆ ಬರ ಅನಿಸುತ್ತದೆ ಆ ದಿನಗಳು ದೇವರ ವರ ಮೊಬೈಲ್ ಇಲ್ಲದೆ ನಗುತ್ತಿದ್ದ ಮನಗಳು ಚಿಕ್ಕ ಪುಟ್ಟ ಆಟಿಕೆಯಲ್ಲೇ ನೆಮ್ಮದಿಯಿದ್ದ ಕ್ಷಣಗಳು ಇರಲಿಲ್ಲ ಯಾವ ಅಸೂಯೆಗೂ ಜಾಗ ಮನಸ್ಸಿನ ತುಂಬೆಲ್ಲಾ ಇದ್ದಿದ್ದು ಬರೀ ರಾಗ ಆ ಕ್ಷಣ ಹಿಂದಿರುಗಿ ಬಾರದೆಂಬ ಅರಿವಿದೆಯಾದರೂ ಮತ್ತೊಮ್ಮೆ ಅನುಭವಿಸುವಾಸೆ ಯಾರು ಏನೆಂದರೂ
----------------------------------
ನೋಂದಣಿ ಐಡಿ : KPFS2-7520