Submission 3652

ಸಲಿಗೆ

ರಚನೆ : ಬಸವಣ್ಣೆವ್ವ.ಬಸನಗೌಡ.ಹರ್ತಿ

----------------------------------

ಕಣ್ಣಂಚಿನ ಸಲಿಗೆ ನೀ ನೀಡಲಿಲ್ಲವೇಕೆ, ಒಂದು ಘಳಿಗೆ ನನ ಬಳಿ ಬರಲಿಲ್ಲವೇಕೆ. ಪ್ರೀತಿಯ ಬಾಗಿಲು ನೀ ತಟ್ಟಲಿಲ್ಲವೇಕೆ, ಪ್ರೇಮದ ಮಾತುಗಳನ್ನಾಡಲಿಲ್ಲವೇಕೆ. ಎನ ನಯನದ ಭಾಷೆ ಅರಿಯಲಿಲ್ಲವೇಕೆ, ಮನಕೆ ನೆಮ್ಮದಿ ನೀಡಲಿಲ್ಲವೇಕೆ. ಕಷ್ಟಗಳು ಕಣ್ಣಿಗೆ ಕಾಣಲಿಲ್ಲವೇಕೆ, ಬದುಕಿಗೆ ಭರವಸೆಯಾಗಲಿಲ್ಲವೇಕೆ. ಬಂದಿರುವೆ ಇಂದೇಕೆ ನನ ಬಳಿಗೆ, ನಿಂತಿರುವೆಯೇಕೆ ಎನ ಸಮಾಧಿ ಬಳಿಗೆ. ನಾನೇನು ಬರುವೆನೆ ನಿನ ಬಾಳಿಗೆ, ಬಾಳ್ವೆಮಾಡುವೆನಾ ನಿನ್ನೊಂದಿಗೆ. ಜೊತೆಯಾಗುವೆನಾ ನಿನ ಸಂಗಾತಕೆ, ಸುಮ್ಮನೆ ಬಿಡು ನನ್ನನ್ನು ಚಿರನಿದ್ರೆಗೆ.

----------------------------------

ನೋಂದಣಿ ಐಡಿ : KPFS2-7492

0
Votes
103
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top