ನನ್ನ ಗೆಳತಿ
ರಚನೆ : ಸೌಮ್ಯಾ
----------------------------------
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು.. ನನ್ನ ಒಡನಾಡಿಯಾದೆ. ಜಾತಿ ಭೇದವನು ತೊರೆದು. ಈ ಜೀವನ ಸಖಿಯಾದೆ . ಸಿರಿತನ ಬಡತನದ ಹಂಗಿಲ್ಲ ನಮ್ಮಿ ಸ್ನೇಹಕ್ಕೆ ಸಾಟಿಯಿಲ್ಲ ಗೆಳತಿ. ಮಿಡಿಯುತ್ತಿದೆ. ಈ ನನ್ನ ಹೃದಯ. ನಿನ್ನ ಸ್ನೇಹದ ಒಡಲಾಳದಲ್ಲಿ. ಪ್ರಶಾಂತ ಅತಿಗಳಾಗಿ. ಮನದ ದಡ ತಲುಪುತ್ತಿವೆ ಸುಮಧುರ ನೆನಪುಗಳು. ನಿನ್ನ ಹೆಸರೊಂದೆ ಸಾಕು. ನನ್ನ ಮನ ತಿಳಿಯಾಗಲು . ಬಾ ಬರೆಯೋಣ ನಾವಿಬ್ಬರೂ ನವ ಸ್ನೇಹ ಚರಿತೆಯನ್ನು ಓ ನನ್ನ ಬಾಳ ಗೆಳತಿ..
----------------------------------
ನೋಂದಣಿ ಐಡಿ : KPFS2-7491