ನನ್ನ ಕವಿತೆ
ರಚನೆ : ಅಲೆಮಾರಿಯ ಆಲಾಪ
----------------------------------
ಖಾಲಿ ಕತ್ತಲೆಯ ತುಂಬೆಲ್ಲ ಅಕ್ಷರಗಳ ಚೆಲ್ಲಿ ತಾರೆಗಳಂತೆ ಮಿನುಗಲು ಕಲಿತ ಪದಗಳಿಂದ ಕವಿತೆ ಹುಟ್ಟಿತು...!! ಕವಿ ಎನಿಸಿಕೊಂಡವನು ವಾಸ್ತವದಲ್ಲಿ ಎಂದೋ ಸತ್ತು ಹೋಗಿದ್ದನು,ಕವಿತೆಯ ಮಾಯೆಯೊಳು..! ಕವಿಯ ಬರಹಗಳು ಕಲ್ಪನೆಗಳಿಗೆ ಜೀವ ತುಂಬಿ, ಕ್ಷಯವಿಲ್ಲದ ಶೂನ್ಯದೊಳು ,ಒಮ್ಮೆ ಹೊಳೆದು ಒಮ್ಮೆ ಕಳೆದು,ಕಲ್ಲಿನ ಪುಸ್ತಕವಾಗಿ, ಇಲ್ಲದಂತೆ ಇದ್ದು,ಓದಲಾಗದ ರಹಸ್ಯವಾಗಿ ಮಣ್ಣಿನೊಳಗಿಳಿದು ಆಕಾಶದಾಚೆ ಜಿಗಿದು ... ಉಲ್ಕೆಯಾಗಿ ಉರಿದು,ಅಮರವಾಯಿತು ಕವಿತೆ..! ಮಸ್ತಕದ ನಕಾಶೆಯ ಬಿಡಿಸುವವನ ಕೈಯಲ್ಲಿನ ಕುಂಚಕ್ಕಂಟಿದ ಕಪ್ಪು ವರ್ಣವಾಗಿ ಸತ್ತು ಹುಟ್ಟತ್ತಲೇ ಇತ್ತು ನನ್ನ ಕವಿತೆ..!!
----------------------------------
ನೋಂದಣಿ ಐಡಿ : KPFS2-7478