Submission 3628

ಪ್ರಬುದ್ಧತೆ ಅಳಿಸಿದ ಕಥೆ

ರಚನೆ : ಗೌತಮ್ ಆರ್

----------------------------------

ಪ್ರೀತಿಯ ಅಂಬೇಡ್ಕರ್, ಕಥೆಯೊಂದ ಹೇಳುವೆ ನಿಮಗೆ ಅದಕೆ ನೀವೆ ಗುರುವು, ನೀವೆ ಆದಿಯು ದೀನ ದುರ್ಬಲರ ನೋವಿಗೆ ಸ್ಪಂದಿಸಿದವರ ಕಥೆ ಮಹಾನಾಯಕನ ಚಿಂತನೆ ಗಾಳಿಗೆ ಹಾರಿಹೋದ ಕಥೆ ನಿಮ್ಮ ಹೆಸರು ಮಂತ್ರವಾದ ಕಥೆ, ನಿಮ್ಮನ್ನು ದೇವರಾಗಿಸಿದ ಕಥೆ ಕಥೆಯೊಂದು ಹೇಳುವೆ , ಪ್ರಬುದ್ಧತೆಯ ಅಳಿಸಿದ ಕಥೆ ಸಮಾಜದ ಮುಂದೆ ಚಿತ್ರಿಸಿದ ಕಥೆ. ಚುನಾವಣೆಯಲ್ಲಿ ಸೋಲಿಸಿದರಂದು, ನಿಮ್ಮ ಹೆಸರಿಲ್ಲದೆ ಚುನಾವಣೆ ಗೆಲ್ಲಲಾರರಿಂದು, ನಿಮ್ಮನ್ನು ಹತ್ತಿರ ಸೇರಿಸಿಲ್ಲ ಅಂದು, ನಿಮ್ಮ ಪುತ್ಥಳಿಯ ಬಾಚಿ ಹಿಡಿಯುವವರಿಂದು ಕಥೆಯೊಂದ ಹೇಳುವೆ, ಸಂವಿಧಾನ ಬದಲಿಸಲಿರುವ ಕಥೆ ಸಂವಿಧಾನ ಅಳಿಸಲು ತಯಾರಿ ನೆಡೆಸಿದ ಕಥೆ ಸಮಾನತೆಯಲ್ಲಿ ಇರುವ ಅಸಮಾನತೆಯ ಕಥೆ ಇಂದಿನ ಭಾರತಕ್ಕೆ ನಿಮ್ಮ ಚಿಂತನೆ ಅವಶ್ಯವೆನಿಸುವ ಕಥೆ.

----------------------------------

ನೋಂದಣಿ ಐಡಿ : KPFS2-7476

4
Votes
163
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top