Submission 3584

ಇದು ಬೆಂಗ್ಳೂರು

ರಚನೆ : ರಾಮಚಂದ್ರ ಹಲಕಿ

----------------------------------

ಜನರೊಳಗೆ ಪ್ರಯಾಣ ನಿಂತ ನಿಂತಲ್ಲೇ ಮೌನ ಯಾರೊಂದಿಗೂ ಯಾರು ಇಲ್ಲ ಯಾರಿಗಾಗಿ ಇದೆಲ್ಲ, ನನಗಾಗಿ? ನಮ್ಮವರಿಗಾಗಿ? ಮುಂಜಾವಿನಲ್ಲಿ ತಂಪಾದ ಮಂಜಿನಲಿ ತೂಕಡಿಕೆ, ಸಿಡುಕು,ಮೌನ ಮಧ್ಯಾಹ್ನ ದೂಳು, ಸದ್ದು, ಗದ್ದಲ ಸಂಜೆ ಬೆಂದ ದೇಹಗಳ ಹೊರಳಾಟ, ಕಾದಾಟ ಜನಜಂಗುಳಿ ಹಿಂಡು ಹಿಂಡು ವಾಹನಗಳ ಬಯಲು, ಮಹಾಬಯಲು ಮುಗಿಯದ ಸಮೂಹ ಅರ್ತಮೌನ ಮನೆಯೊಳಗಿಲ್ಲ, ಕೆಲಸದಲ್ಲಿಲ್ಲ, ಎಲ್ಲಿದ್ದೀನಿ? ಯಾಕಿದ್ದೀನಿ ? ಕೆಂಗಣ್ಣು, ಬೈಗುಳ, ಉಡಾಫೆ, ಖಾಕಿಧಾರಿಗಳದು, ಅಂಗಡಿಯವನದು ಹೊಸಬನು ದಿಕ್ಕಿಲ್ಲದ ಅನಾಥ ಹಳಬನು ದಾರಿ ಮರೆತುಹೋದ ಹುಚ್ಚ.

----------------------------------

ನೋಂದಣಿ ಐಡಿ : KPFS2-7443

0
Votes
113
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top