Submission 3464

ಎಲ್ಲ ಒಂದೆ ಕಾಣಿರೋ

ರಚನೆ : ಲೋಕೇಶ ಎಂ

----------------------------------

ಏಸು ಈಶ ಅಲ್ಲ ಎಲ್ಲ ಒಂದೆ ಕಾಣಿರೊ. ದೇವರೆಸರಲಿ ಕಡಿದೊಡೆದಾಡದೆ ಸದ್ಗತಿಯ ಕಣಿರೋ. ಮುನ್ನ ಕಡಿದೊಡೆದಾಡಿದವರು ಕಂಡರೇನು ದೇವರಾ? ಮೇಲಿನಿಂದ ಬಂದ ದೇವರು ಹಂಚಿ ಕೊಟ್ಟರೇನು ಭೂಮಿಯಾ? ಕಲ್ಲು ಮಣ್ಣು ರಾಶಿಮಾಡಿ ಕೂಗಿ ಕರೆದರೇನು ದೇವರಾ? ಮನದಿ ದ್ವೇಷ ತುಂಬಿ ಬೇಡಿಕೊಂಡರೇನು ದೇವರಾ? ಮತಗಳಿಂದ ಮತಿಗೆಟ್ಟ ಮಾನವ ಮರೆತ ಮಾನವತೆಯನು. ಬುವಿಯ ಜೀವ ಕೋಟಿಗೊಂದೆ ದೈವವೆಂಬುದ ಮರೆತನು. ದೇಶಕೊಂದು ಜಾತಿಗೊಂದು ದೇವರಿಲ್ಲ ಕಾಣಿರೋ. ಪ್ರೀತಿಯಲ್ಲಿ ಕರುಣೆಯಲ್ಲಿ ಇಲ್ಲೆ ಇರುವ ತಿಳಿಯಿರೊ.

----------------------------------

ನೋಂದಣಿ ಐಡಿ : KPFS2-7355

1
Votes
116
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top