Submission 3462

ಮಹಾದೇವನ ನಾದದಿಂ ಉದಯಿಸಿದ ಕಸ್ತೂರಿ ಕನ್ನಡ

ರಚನೆ : ಅಂಜಲ ಜೋನ್

----------------------------------

ಮೌನದ ಮಣ್ಣಲಿ ಉಸಿರೇ ನಿಂತಿತ್ತು ಭುವನ, ನಿಶ್ಶಬ್ದದ ನೋವು ಭಾರದಾಯಿತು ಗಗನ. ಅಕ್ಷರವಿಲ್ಲದ ರುಷಿ, ಕಣ್ಣು, ಕಿವಿ, ವಾಣಿ ಹೀನ, ಜನರ ನಡುವೆ ಧ್ಯಾನದಿ ತತ್ತ್ವದಲಿ ತೀರದ ನಾದ. ಅಂದೆ ಮಹಾದೇವ ತಾಳಲಾರೆವ ತಾಳಂ, ರುದ್ರಾಕ್ಷ ಜಾರಿತು, ಡಮರು ಗರ್ಜಿಸಿದ ಕಾಲಂ; ವಿದ್ಯುತ್‌ವಜ್ರವೇ ಬೀಳಿ ಬೀಜ ಅಕ್ಷರ ಕೆತ್ತಿತು, ರುದ್ರಾಕ್ಷ–ಬಿಂದು ಮಳೆ ಹನಿಯ ರೂಪಕ್ಕೆ ಬಂತು. ತೃಷಿತ ರುಷಿ ಕಣ್ಣು ತೆರೆದ, ಮಳೆಯ ಶ್ರವಣ, ಆರೂಢ ರುದ್ರಾಕ್ಷ ಕುಡಿದು, ಅಕ್ಷರ ಕನ್ನಡ ಸ್ವಾದ; ಮರಣಮೋಕ್ಷ ಸ್ಪರ್ಶಂ ಅದು ಕಲ್ಲಾಗು ತೀರ್ಮಾನ, ತತ್ತ್ವಮಯ ವಾಣಿ ಹುಟ್ಟಿ, ಕಿವಿ-ಕಣ್ಣು ಕೂಡಾ ಲಭಿಸಿದ. ಆ ಕ್ಷಣ ಕಸ್ತೂರಿ ಕನ್ನಡ ಉದಿತಮಾಯ್ತು; ಜಗಕೆ ವಾಣಿ ಬಿಚ್ಚಿ, ಜೀವಕ್ಕೆ ನಾದ ಕೊಟ್ಟಿತು

----------------------------------

ನೋಂದಣಿ ಐಡಿ : KPFS2-7353

53
Votes
489
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top