ನನ್ನ ಅಸ್ತಿತ್ವ
ರಚನೆ : ಧೃತಿ ಎಸ್ ಗೌಡ
----------------------------------
ಜನ್ಮವೊಂದು ದೈವದ ಲೀಲಾ, ರೂಪವೊಂದು ದೇಹದ ಹೂವಿನ ವೇಷ. ಹೆಣ್ಣು-ಗಂಡು ಗಡಿಯಾಚೆ ನಾನು, ನಾನೇ ಆತ್ಮದ ಅಮೃತ ರಾಗ. ಕನ್ನಡಿ ನೋಡಿದಾಗ ನಾಚಿಕೆ ಅಲ್ಲ, ಅಲ್ಲಿದೆ ನನ್ನ ನಿಜದ ಸೌಂದರ್ಯ. ಸಮಾಜದ ಕಣ್ಣು ಕಲ್ಲಾಗಿರಲಿ, ನನ್ನ ಮನಸ್ಸು ಕಮಲದಂತೆ ಅರಳಲಿ. ನಾನು ಹಕ್ಕು ಕೇಳುವುದಿಲ್ಲ, ನಾನು ಗೌರವ ಬಯಸುತ್ತೇನೆ. ನನ್ನ ಬಣ್ಣ,ನನ್ನ ಸ್ವರ, ನನ್ನ ಮಾರ್ಗ, ನನ್ನ ನಾಡಿ ದೇವರ ನಾದ. ಲಿಂಗದ ಗೋಡೆಗಳಾಚೆ ನಾನಿರುವೆ, ನನ್ನ ಅಸ್ತಿತ್ವವೇ ಸೃಷ್ಟಿಯ ಶಾಶ್ವತ ಮೂಲ.
----------------------------------
ನೋಂದಣಿ ಐಡಿ : KPFS2-7330