Submission 3424

ನವ ಭಾವ

ರಚನೆ : ಜಯಪ್ರಕಾಶ ಆರ್ ಜಿ

----------------------------------

ನವ ಭಾವ ಇಣುಕಿದೆ ಮನದ ಮೂಲೆಯಲಿ ನವ ನಾಳೆಯ ಜಯದ ಹಂಬಲದಲಿ ನೋವಿದೆಯೋ ನಲಿವಿದೆಯೋ ನಾ ಕಾಣೆ ಮುಂದೆನ್ನ ಬದುಕಿನಲಿ ನಾ ಮಾತ್ರ ಪ್ರಸನ್ನನಾಗಿಹೆನು ನನ್ನವರೆನಗೆ ಕರುಣಿಸಿದ ಸಂಸ್ಕಾರದ ಜ್ಯೋತಿಯಲೀ. ಬದುಕಿದು, ಬದುಕಯ್ಯ ನೀ ಬಯಸಿದಂತೆ ಇನ್ಯಾರಿಗೂ ನೋವನೆಂದು ಬಯಸದಂತೆ ಕರ್ಮವಿದು, ಕಾಯಕವನೆಸಗು ನೀ ನಿಷ್ಕಾಮನಂತೆ ಹಸನಾಗಲಿ ನಿನ್ನೊಲವು ನಿನ್ನನ್ನೇ ಹರಸುವಂತೆ ಕೊನೆಯಾಗಲಿ ಈ ಬದುಕು ಮುಂದೆಂದೋ ಆ ಭಗವಂತನನೆಸಿದಂತೆ.

----------------------------------

ನೋಂದಣಿ ಐಡಿ : KPFS2-7329

1
Votes
97
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top