ಇಲ್ಲಿರುವುದು ಸುಮ್ಮನೆ
ರಚನೆ : ಡಾ.ರಮೇಶ ಎಸ್. ಕತ್ತಿ
----------------------------------
ಕಟ್ಟಿದೆ ಮನೆಯ ಮುಂದೆ ಅಲ್ಲೇ ಸನಿಹದಲ್ಲೇ ವಲಸಿಗರ ಜೋಪಡಿಗಳ ಸಾಲಿನಲಿ ಎಷ್ಟು ನಗುವಿದೆ. ಆಕಾಶವೇ ಹೊದಿಕೆಯಾಗಿಸಿ ನಕ್ಷತ್ರಗಳ ಎಣಿಕೆಯಲಿ ಸಂಭ್ರಮವೇ ಮನೆಮಾಡಿಕೊಂಡಿದೆಯಲ್ಲಿ ನಮ್ಮ ಅಂತಸ್ತಿನ ಮನೆ ಲೆಕ್ಕವಿಲ್ಲವಲ್ಲ ಸೋತು ಸುಣ್ಣವಾಗುವ ಹೊತ್ತು ಜಗದ ಸಂಭ್ರಮದಲ್ಲಿ ಲೆಕ್ಕವಿಡುವ ಅಸಂತೋಷಗಳ ಬಯಲಿನಾಟದಲಿ ಬಯಲಾಗುವ ಮನೆಯೂ, ಜೋಪಡಿಯೊ ಒಂದೇ ಅವುಗಳಲಿರುವ ಶ್ವಾಸವಿಶ್ವಾಸಗಳು ಒಂದೇ ಪಾತ್ರ ಸ್ಥಳ ಭಿನ್ನ ಭಿನ್ನ ದಾರಿಗಳಲ್ಲಿ ಸಾಗಿದವರೆಲ್ಲರೂ ವಾಸ್ತು ಬೆಡರೂಂ, ಜಗುಲಿಗೂ ಗಾಳಿ ಅಲ್ಲಿಯೂ ಬೀಸಿ ಇಲ್ಲಿಯೂ ಸೋಸಿ ನೂರ್ಮಡಿಸಿತು ವಾಸಕ್ಕೆ ಅಂತಸ್ತಿನ ಮನೆಯೂ-ಜೋಪಡಿಯೂ ಎರಡೂ ಒಂದೇ.. ಕೆಲದಿನವಿದ್ದು ಹೇಗೋ ಹೋಗುವದಿದೆಯಲ್ಲ ಇಲ್ಲಿರುವದು ಸುಮ್ಮನೇ ಅಲ್ಲಿದೇ ನಮ್ಮನೆ
----------------------------------
ನೋಂದಣಿ ಐಡಿ : KPFS2-7285