Submission 3310

ಸಾಲುಗಳ ಸಂತೆ

ರಚನೆ : ರಾಘವೇಂದ್ರ ಜೆ

----------------------------------

ಮನದ ಮಾತಿಗೆ ಜೊತೆಯದವಳು ಮುಗುಳ್ನಗೆಯ ಚೆಲ್ಲಿ ಮಲ್ಲಿಗೆಯ ಪರಿಮಳ ಬೀರಿದವಳು ಅರಳಿದ ಮನಗಳ ಹಿಂದೆ ಅರಿಯದ ಪ್ರೀತಿ ಇದೆ ಮುಗ್ಧ ಮನದ ತುಂಬೆಲ್ಲ ನಿಷ್ಕಲ್ಮಶ ಭಾವವಿದೆ ಪ್ರೀತಿಯನು ಪ್ರೀತಿಗಾಗಿ ಪ್ರೀತಿಸುವ ಹೃದಯವಿದೆ ಭಾವಕೂ ಮೀರಿದ ಭಾವನೆಗಳೇ ತುಂಬಿದ ರೂಪಸಿ ಅವಳು ಅವಳ ವರ್ಣಿಸಲು ಸಾಲದು ಪದಗಳ ಸಾಲು ಬರೆಯುವೆನೆಂದರೆ ಅಕ್ಷರಕೆ ನಿಲುಕುವುದಿಲ್ಲ ಅವಳ ಮುಗ್ಧ ಹೃದಯದಿ ಪ್ರೀತಿ ವಿನಃ ಬೇರೇನು ಇಲ್ಲ ಅವಳ ಪ್ರೀತಿಗೆ ಅದರ ರೀತಿಗೆ ನನ್ನೊಲವ ಕಾಣಿಕೆ ಅವಳಿಗೆ ಅವಳೇ ಸರಿಸಾಟಿ ಬೇರಾವ ಹೋಲಿಕೆ ಅಂಥವಳೇ ನನ್ನಾಕೆ ಅವಳಿಗೆಂದೇ ತಂದೆ ಸಾಲುಗಳ ಸಂತೆ.

----------------------------------

ನೋಂದಣಿ ಐಡಿ : KPFS2-7246

5
Votes
167
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top