Submission 3302

ಅಮ್ಮ

ರಚನೆ : ಪೂಜಾ ಸಿ ನಂದಿಮಠ

----------------------------------

ಪದಗಳು ಕೂಡ ಮೂಕ ವಿಸ್ಮಿತವಾಗುವವು ... ಏಕೆಂದರೆ ಪದಗಳಿಗೂ ಕೂಡ ಗೊತ್ತಿದೆ ಅಮ್ಮನ ಪ್ರೀತಿಯನ್ನು ಕಾಳಜಿಯನ್ನು ವರ್ಣಿಸಲಿಕ್ಕೆ ಅಸಾಧ್ಯ ಎಂದು... ತಪ್ಪು ಮಾಡಿದಾಗ ಬುದ್ಧಿ ಹೇಳುವಳು ಅವಳೇ... ಸೋತಾಗ ಸ್ಥೈರ್ಯ ತುಂಬುವವಳು ಅವಳೇ... ಅವಳ ಆಶೀರ್ವಾದವೇ ನಮಗೆ ಗೆಲುವಿನ ನಾದ.. ಅಮ್ಮ ಎಂಬ ಎಡಕ್ಷರವೇ ಸುಂದರ ಪದ.. ಗುಮ್ಮ ಬರುತ್ತದೆ ಎಂದು ಊಟ ಮಾಡಿಸುವ ನನ್ನ ಅಮ್ಮ.. ಎಲ್ಲರ ನೋವಿಗೂ ಸ್ಪಂದಿಸುವ ಮುದ್ದು ಅಮ್ಮ.. ಅವಳ ಮಡಿಲಿನಲ್ಲಿ ಮಲಗಿದಾಗಲೆಲ್ಲ ಆಯಾಸವೇ ಮಾಯವಾಗುವುದು .. ಎಲ್ಲೂ ಸಿಗದ ನೆಮ್ಮದಿ ಅವಳ ಮಡಿಲಿನಲ್ಲಿ ಸಿಗುವುದು.. ದೇವರಲ್ಲಿ ನನ್ನ ಕೋರಿಕೆ ಒಂದೇ ನನಗಾಗಿ ಮುಂದಿನ ಜನ್ಮ ಇದ್ದರೆ .. ಅಮ್ಮನ ಪಾದುಕೆಯಾಗಿ ಅವಳ ಋಣ ತೀರಿಸಲು ಒಂದೇ ಒಂದು ಅವಕಾಶ ನನಗೆ ಸಿಗಲಿ.. ಪ್ರತಿ ಜನ್ಮದಲ್ಲೂ ಅವಳ ಮಗಳಾಗಿ ಹುಟ್ಟುವ ಅವಕಾಶ ನನಗೆ ಸಿಗಲಿ..

----------------------------------

ನೋಂದಣಿ ಐಡಿ : KPFS2-7240

2
Votes
139
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top