ರಕ್ತಸಂಬಂಧ
ರಚನೆ : ಶ್ರೀನಿವಾಸ ಎಚ್ ಎನ್ ಕಲಾವಿದ
----------------------------------
ಅಮ್ಮನ ಪ್ರೀತಿ ಅಮೃತ ಈ ಅಮೃತ ಎಂದಿಗೂ ವಿಷವಾಗಲಾಗದು. ಅಮ್ಮನ ಮಡಿಲು ಸ್ವರ್ಗ ಈ ಸ್ವರ್ಗ ಎಂದಿಗೂ ನರಕವಾಗಲಾರದು. ಕರುಳ ಸಂಬಂಧ ಹರಿದು ಜೈವಿಕ ಬಾಂಧವ್ಯ ಬೆಳೆದು. ಈ ನನ್ನ ಉಸಿರು ಸೃಷ್ಟಿಸಿದ ಇವರೇ ನನ್ನ ಪ್ರೀತಿಯ ಜನುಮದಾತರು. ಭಾವನಾತ್ಮಕ ಸಂಪರ್ಕ ಕಲ್ಪಿಸುವ ನನ್ನ ರಕ್ತ ಸಂಬಂಧದ ಪ್ರೀತಿಯ ಬಂಧನ. ಪರಸ್ಪರ ಪ್ರೀತಿ ಗೌರವ ಮತ್ತು ವಿಶ್ವಾಸ ಬೆಳೆಸುವ ನನ್ನ ಆಪ್ತಮಿತ್ರನ ಹೃದಯ ನಂಟಿನ. ಸಹಧರ್ಮಿಣಿ ಹಾಲಿನಂತೆ ಮಧುರ ಅರ್ಧಾಂಗಿ ಜೇನಿನಂತೆ ಅಮರ.
----------------------------------
ನೋಂದಣಿ ಐಡಿ : KPFS2-7198