ನಂಬಿಕೆಯ ಪಯಣ
ರಚನೆ : ಶ್ರವಣಕುಮಾರ್ ಕೆ
----------------------------------
ತಾಯಿಯ ನೋಟದಲ್ಲಿ ಮಮತೆ ಮೂಡುತ್ತದೆ ಅವಳ ಪ್ರಾರ್ಥನೆಯಲಿ ಶಕ್ತಿ ಕಾಣುತ್ತದೆ. ಮನದಲಿ ನಂಬಿಕೆಯ ದೀಪ ಬೆಳಗುತ್ತದೆ ಸಂತೋಷದ ಬೆಳಕು ಬಾಳು ತುಂಬುತ್ತದೆ. ಕಾಲ ಬದಲಾದರೂ ನಂಬಿಕೆ ಇರಲಿ ಮಂಜಿನಲಿ ಸೂರ್ಯನ ಬೆಳಕು ಹೊಳೆಯಲಿ. ಕೆಲಸ ಮಾಡು ಹೃದಯದ ಶ್ರದ್ಧೆಯಿಂದ ಫಲ ಸಿಗುವುದು ನಿನ್ನ ನಂಬಿಕೆಯ ಬಲದಿಂದ. ಜೀವನದ ಹಾದಿಯಲಿ ಕನಸು ಬೆಳೆಸು ಅದು ನಿನ್ನ ಪಯಣದ ಪ್ರೇರಣೆ ಆಗಿಸು. ದುಃಖ ಬಂದರೂ ನಗು ಮರೆಯದಿರು ಹಾದಿ ಕಠಿಣವಾದರೂ ನಿಲ್ಲದೆ ಮುಂದೆ ಸಾಗುತಿರು.
----------------------------------
ನೋಂದಣಿ ಐಡಿ : KPFS2-7171